Friday, September 11, 2026
Homeತಾಜಾ ಸುದ್ದಿರಾಜ್ಯದಲ್ಲಿ ಇನ್ಮುಂದೆ ಕೊರೋನಾ ಟೆಸ್ಟ್ ಮಾಡಿಸಲು ಆಧಾರ್ ಕಡ್ಡಾಯ

ರಾಜ್ಯದಲ್ಲಿ ಇನ್ಮುಂದೆ ಕೊರೋನಾ ಟೆಸ್ಟ್ ಮಾಡಿಸಲು ಆಧಾರ್ ಕಡ್ಡಾಯ

- Advertisement -
- Advertisement -

ಬೆಂಗಳೂರು: ನಕಲಿ ವಿಳಾಸ ನೀಡಿ ಕೋವಿಡ್ ಟೆಸ್ಟ್ ಮಾಡಿಸಿ ಕೊರೋನಾ ಪಾಸಿಟಿವ್ ಬಂದಮೇಲೆ ನಾಪತ್ತೆಯಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇನ್ಮುಂದೆ ಕೊರೊನಾ ಪರೀಕ್ಷೆಗೆ ಆಧಾರ್ ಕಾರ್ಡ್, ವೋಟರ್ ಐಡಿ ಕಡ್ಡಾಯಗೊಳಿಸಿ ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುಮಾರು 4,500 ಮಂದಿ ಸೋಂಕಿತರು ನಕಲಿ ವಿಳಾಸ ನೀಡಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಬೆಂಗಳೂರು ಕೊರೊನಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಮಾತನಾಡಿದ ಸಿಎಂ ಬಿಎಸ್ ವೈ, ಕೊರೊನಾ ಸೋಂಕು ಪರೀಕ್ಷೆ ಸಂದರ್ಭದಲ್ಲಿ ತಪ್ಪು ವಿಳಾಸ ನೀಡಿ ನಾಪತ್ತೆಯಾದವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವೋಟರ್ ಐಡಿ, ಆಧಾರ್ ಕಾರ್ಡ್ ಜೊತೆಗೆ ಇತರೆ ವಿಳಾಸದ ದಾಖಲೆಗಳೊಂದಿಗೆ ಒಟಿಪಿ ಸಂಖ್ಯೆ ಪಡೆಯುವುದನ್ನು ಕಡ್ಡಾಯಗೊಳಿಸುವಂತೆ ಸೂಚನೆ ನೀಡಿದ್ದಾರೆ.

- Advertisement -

Latest News

error: Content is protected !!