Thursday, April 25, 2024
Homeತಾಜಾ ಸುದ್ದಿಬೆಂಗಳೂರಿನಲ್ಲಿರುವ ದೇಶದ ಅತೀ ದೊಡ್ಡ ಕೋವಿಡ್ ಕೇರ್​ ಸೆಂಟರ್​ ಸೋಮವಾರದಿಂದ ಆರಂಭ

ಬೆಂಗಳೂರಿನಲ್ಲಿರುವ ದೇಶದ ಅತೀ ದೊಡ್ಡ ಕೋವಿಡ್ ಕೇರ್​ ಸೆಂಟರ್​ ಸೋಮವಾರದಿಂದ ಆರಂಭ

spot_img
- Advertisement -
- Advertisement -

ಬೆಂಗಳೂರು : ದೇಶದ ಅತೀ ದೊಡ್ಡ ಕೋವಿಡ್ ಕೇರ್ ಸೆಂಟರ್‌ ಸೋಮವಾರದಿಂದ ಪ್ರಾರಂಭವಾಗುವುದು ಎಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದವಾರದಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ರೋಗಲಕ್ಷಣ ಇಲ್ಲದ ಕೋವಿಡ್ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದ್ದು, ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಹಾಗೂ ಅಧಿಕಾರಿಗಳ ತಂಡ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ್ದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಯುಕ್ತರು ಬಿಐಇಸಿ ಕೋವಿಡ್ ಕೇರ್ ಸೆಂಟರ್‌ನಲ್ಲಿ 5,000 ಆಸನಗಳ ಸಾಮರ್ಥ್ಯವುಳ್ಳ ಹಾಲ್‌ಗಳು ಈಗಾಗಲೆ ಸಿದ್ದವಾಗಿದ್ದು ಸಾಮಾಗ್ರಿಗಳ ಬಾಡಿಗೆ ಹಾಗೂ ಖರೀದಿ ವಿಚಾರದಲ್ಲಿ ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ಗೊಂದಲಗಳಿದ್ದವು. 28 ಸಾಮಾಗ್ರಿಗಳಿಗೆ ಒಂದು ಸೆಟ್‌ಗೆ ಒಂದು ದಿನಕ್ಕೆ 800 ರೂಪಾಯಿ ನಿಗದಿ ಮಾಡಲಾಗಿದೆ ಎಂದರು. 5,000 ಬೆಡ್‌ಗಳಿಗೆ ಒಂದು ತಿಂಗಳಿಗೆ 12 ಕೋಟಿ ಬಾಡಿಗೆ ನೀಡಬೇಕಾಗುತ್ತಿತ್ತು. ಆದರೆ ಈಗೆ ಮರು ಬಳಕೆಯ ಮಂಚ ಹಾಸಿಗೆ ದಿಂಬು ಹೊದಿಕೆ ಸೇರಿದಂತೆ 7 ಸಾಮಾಗ್ರಿಗಳನ್ನ 2 ಕೋಟಿ 40 ಲಕ್ಷಕ್ಕೆ ಖರೀದಿ ಮಾಡಲಾಗುವುದು, ಉಳಿದ ಸಾಮಾಗ್ರಿಗಳಿಗೆ ತಿಂಗಳಿಗೆ 3 ಕೋಟಿ 25 ಲಕ್ಷ ಬಾಡಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸಾಮಾಗ್ರಿಗಳ ಖರೀದಿಸಲು ಮೊದಲು 7,500 ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ, ಬಿಬಿಎಂಪಿ ಅಧಿಕಾರಿಗಳ ತಂಡ ಪರಿಶೀಲನೆ ಮಾಡಿ ಅದನ್ನ 4,800 ರೂಪಾಯಿಗಳಿಗೆ ಇಳಿಸಲಾಗಿದೆ, ಈ ಹಿಂದಿನ ಆಯುಕ್ತರು ನಿಗದಿ ಮಾಡಿದ್ದಾರೆ. ಆದರೆ, ನಾನು ಬದಲಾವಣೆ ಮಾಡಲಾಗುವುದಿಲ್ಲ ಎಂದರು.

- Advertisement -
spot_img

Latest News

error: Content is protected !!