Monday, June 8, 2026
Homeತಾಜಾ ಸುದ್ದಿವಾಟ್ಸಾಪ್ ನಲ್ಲಿ ಬಾಯ್ ಫ್ರೆಂಡ್ ಬ್ಲಾಕ್ ಮಾಡಿದ ಎಂದು ನೇಣಿಗೆ ಶರಣಾದ ಯುವತಿ

ವಾಟ್ಸಾಪ್ ನಲ್ಲಿ ಬಾಯ್ ಫ್ರೆಂಡ್ ಬ್ಲಾಕ್ ಮಾಡಿದ ಎಂದು ನೇಣಿಗೆ ಶರಣಾದ ಯುವತಿ

- Advertisement -
- Advertisement -

ಮುಂಬೈ: ವಾಟ್ಸಾಫ್ ನಲ್ಲಿ ಬಾಯ್ ಫ್ರೆಂಡ್ ಬ್ಲಾಕ್ ಮಾಡಿದ ಎಂದು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈ ಹೊರವಲಯದ ದಹಿಸರ್ ನಲ್ಲಿ ಎಂಬಲ್ಲಿ ನಡೆದಿದೆ.

ಪ್ರಣಾಲಿ ಕೋಕರೆ ಎಂಬ ಯುವತಿ ಆತ್ಮಹತ್ಯೆಗೆ ಶರಣಾದ ಯುವತಿ.  ಬುಧವಾರದಂದು ಇಬ್ಬರೂ ವಿವಾಹ ಸಮಾರಂಭಕ್ಕೆ ತೆರಳಿದ್ದು ವಾಪಸ್ ಬಂದಾಗ ಪ್ರಣಾಲಿ, ಪ್ರಿಯತಮನ ರೂಮಿನಲ್ಲಿಯೇ ಉಳಿದುಕೊಳ್ಳಲು ಬಯಸಿದ್ದಳು.

ಇದಕ್ಕೆ ನಿರಾಕರಿಸಿದ ಆಕೆಯ ಪ್ರಿಯತಮ ರೂಮಿನಿಂದ ಹೊರಗೆ ಕಳುಹಿಸಿದ್ದ ಎನ್ನಲಾಗಿದೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಮರಳಿ ಬಂದ ಆಕೆ ಪ್ರಿಯತಮನ ಜೊತೆ ಮತ್ತೆ ಜಗಳ ಆಡಿದ್ದಾಳೆ.

ಇದರಿಂದ ಬೇಸತ್ತ ಆತ ರೂಮಿನಲ್ಲಿ ಆಕೆಯೊಬ್ಬಳನ್ನೇ ಬಿಟ್ಟು ಹೊರಗೆ ಹೋಗಿದ್ದು ಜೊತೆಗೆ ವಾಟ್ಸಾಪ್ ನಂಬರ್ ಬ್ಲಾಕ್ ಮಾಡಿದ್ದಾನೆ. ಇದರಿಂದ ಮನನೊಂದ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

- Advertisement -

Latest News

error: Content is protected !!