Thursday, April 18, 2024
Homeಕರಾವಳಿಉಡುಪಿಅಳಿವಿನಂಚಿನಲ್ಲಿರುವ ನಾಗಲಿಂಗ ವೃಕ್ಷದ ಉಳಿವಿಗಾಗಿ ಯುವಕನ ಅಭಿಯಾನ: ಕಿನ್ನಿಗೋಳಿಯ ವಿನೀಶ್ ಪೂಜಾರಿಯ ಪರಿಸರ ಪ್ರೇಮ ಎಲ್ಲರಿಗೂ...

ಅಳಿವಿನಂಚಿನಲ್ಲಿರುವ ನಾಗಲಿಂಗ ವೃಕ್ಷದ ಉಳಿವಿಗಾಗಿ ಯುವಕನ ಅಭಿಯಾನ: ಕಿನ್ನಿಗೋಳಿಯ ವಿನೀಶ್ ಪೂಜಾರಿಯ ಪರಿಸರ ಪ್ರೇಮ ಎಲ್ಲರಿಗೂ ಮಾದರಿ

spot_img
- Advertisement -
- Advertisement -

ಮುಲ್ಕಿ: ಅಳಿವಿನಂಚಿನಲ್ಲಿರುವ ನಾಗವೃಕ್ಷದ ಕಿನ್ನಿಗೋಳಿಯ ನಿಡ್ಡೋಡಿಯ ಯುವಕ ವಿನೀಶ್ ಪೂಜಾರಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅಳಿವಿನಂಚಿನಲ್ಲಿರುವ ಈ ವೃಕ್ಷದ ಸಸಿಗಳನ್ನು ತಾವೇ ಬೆಳೆಸಿ ಎಲ್ಲರಿಗೂ ಉಚಿತವಾಗಿ ಹಂಚಿ ಅದರ ಮಹತ್ವವನ್ನು ತಿಳಿಸಿಕೊಡುತ್ತಿದ್ದಾರೆ.

ವಿನೀಶ್ ಪೂಜಾರಿ ಈ ವೃಕ್ಷದ ಬೀಜಗಳನ್ನು ಸಂಗ್ರಹಿಸಿ ಅದರಿಂದ 700 ಸಸಿಗಳನ್ನು ಮಾಡಿದ್ದಾರೆ,ಸಂಘಸಂಸ್ಥೆಗಳಿಗೆ, ದೇವಸ್ಥಾನಗಳಿಗೆ, ಆಸಕ್ತ ಜನರಿಗೆ ಹಂಚಿದ್ದಾರೆ.

ಅಂದ್ಹಾಗೆ ಈ ಮರದ ವಿಶೇಷತೆ ಅಂದರೆ ಮರವು ದೊಡ್ಡ  ಗಾತ್ರದಲ್ಲಿ  ಬೆಳೆಯುತ್ತದೆ ,ಹಾಗೂ ಕಾಂಡದಿಂದ ತುದಿಯ ವರೆಗೂ ತುಂಬಾ ಬೀಳಲುಗಳನ್ನು ಹೊಂದಿದ್ದು  ಬೀಳಲುಗಳಲ್ಲಿ ಹೂವು ಬಿಟ್ಟು ,ದೊಡ್ಡ ದೊಡ್ಡ ಗಾತ್ರದ ಕಾಯಿ ಬಿಡುತ್ತದೆ  ಇದರ ಹೂವು 5 ದಳಗಳಿಂದ ಕೂಡಿದ್ದು ಇದರ ದಳದ ಕೆಳಭಾಗ ಹಳದಿ ಬಣ್ಣದಲ್ಲಿರುತ್ತದೆ, ಹೂವಿನ ಮಧ್ಯ ಭಾಗದಲ್ಲಿ  ಲಿಂಗಾಕೃತಿಯನ್ನು ಹೊಂದಿದ್ದು ಲಿಂಗಕ್ಕೆ  ಹಾವಿನ ಹೆಡೆಯಂತೆ ಬಾಗಿ ಕೊಂಡಿರುದನ್ನು ಸೂಚಿಸುತ್ತದೆ. ಆದ್ದರಿಂದ ಇದಕ್ಕೆ ನಾಗಲಿಂಗ. ನಾಗ ಚಂಪಾ, ಇಂಗ್ಲಿಷ್ನಲ್ಲಿ ( cannonball tree) ಎಂಬ ಹೆಸರಿನಲ್ಲಿ ಕರೆಯುತ್ತಾರೆ. ನೋಡಲು ಸುಂದರವಾಗಿದ್ದು ,

ಸುಗಂಧಭರಿತವಾದ ಸುವಾಸನೆಯನ್ನು ಹೊಂದಿರುತ್ತದೆ ಆದರೆ ಇದರ ಕಾಯಿ ತುಂಬಾ ವಾಸನೆಯಿಂದ ಕೂಡಿರುತ್ತದೆ. ನಾಗಲಿಂಗ ವೃಕ್ಷವು ಔಷಧೀಯ ಗುಣಗಳನ್ನು ಹೊಂದಿದ್ದು ಆಯುರ್ವೇದ ಪದ್ಧತಿಗಳಲ್ಲಿ ಬಳಸುತ್ತಾರೆ.  ಹಾಗೂ  ಕೆಲವು  ದೇವಾಲಯಗಳಲ್ಲಿ ಕಾಣಬಹುದು ಹಿಂದೂಧರ್ಮದಲ್ಲಿ ಈ ವೃಕ್ಷಕ್ಕೆ ವಿಶೇಷವಾದ ಭಕ್ತಿ ಗೌರವ ಹಾಗೂ ನಿಯಮವನ್ನು ಹೊಂದಿರುತ್ತದೆ, ಇದು ಪ್ರಕೃತಿಗೂ,ದೇವರಿಗೂ ಇರುವ ಸಂಬಂಧವನ್ನು ಸೂಚಿಸುತ್ತದೆ.

 ಆದರೆ ಈ ಮರವು ಈಗ ಅಳಿವಿನಂಚಿನಲ್ಲಿದ್ದು ಇದನ್ನು ಬೆಳೆಸಿ ಸಂರಕ್ಷಿಸಿ ಮುಂದಿನ ಪೀಳಿಗೆಗೂ ಈ ಮರದ ಪರಿಚಯವಾಗಬೇಕು ಎಂಬುವುದು ವಿನೀಶ್ ಪೂಜಾರಿ ಉದ್ದೇಶ.ಅದಕ್ಕಾಗಿ ಈಗಾಗಲೇ 3000ಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ್ದಾರೆ. ದೇವಾಲಯಗಳಿಗೆ  ಕೊಟ್ಟು ನೆಟ್ಟು ಬರುತ್ತಾರೆ.ಅಲ್ಲದೆ ಕೇಳಿದವರಿಗೆ ಉಚಿತವಾಗಿ ಕೊಡುವ ವ್ಯವಸ್ಥೆ ಕೂಡ ಮಾಡುತ್ತಿದ್ದಾರೆ.

- Advertisement -
spot_img

Latest News

error: Content is protected !!