Thursday, May 2, 2024
Homeಕರಾವಳಿಉಡುಪಿಕಾರ್ಕಳದಲ್ಲಿ ಮನುಷ್ಯನ ಮುಖವನ್ನೇ ಹೋಲುವ ಕೀಟ ಪತ್ತೆ: ಪ್ರಕೃತಿ ಪ್ರಿಯರಲ್ಲಿ ಬೆರಗು ಮೂಡಿಸಿದ ಈ ಕೀಟದ...

ಕಾರ್ಕಳದಲ್ಲಿ ಮನುಷ್ಯನ ಮುಖವನ್ನೇ ಹೋಲುವ ಕೀಟ ಪತ್ತೆ: ಪ್ರಕೃತಿ ಪ್ರಿಯರಲ್ಲಿ ಬೆರಗು ಮೂಡಿಸಿದ ಈ ಕೀಟದ ಆಯಸ್ಸು 25 ರಿಂದ 30 ದಿನವಷ್ಟೇ!

spot_img
- Advertisement -
- Advertisement -

ಕಾರ್ಕಳ: ಥೇಟ್ ಮನುಷ್ಯನನ್ನೇ ಹೋಲುವ ಕೀಟವೊಂದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪತ್ತೆಯಾಗಿದ್ದು ,ಪ್ರಕೃತಿ ಪ್ರಿಯರ ಆಸಕ್ತಿ ಕೆರಳುವಂತೆ ಮಾಡಿದೆ. ಇದು ಪತ್ತೆಯಾಗಿರುವುದು ಕಾರ್ಕಳದ ಬೈಪಾಸ್ ಬಳಿಯ ತಾಳೆತೋಟವೊಂದರಲ್ಲಿ. ಈ ಕೀಟದ ತಲೆಯಲ್ಲಿರುವ ಟೋಪಿ, ಎರಡು ಕಣ್ಣು, ದೊಡ್ಡ ಮೂಗಿನ ಕೆಳಗಿನ ಮೀಸೆಯಿಂದಾಗಿ ಇದು ಪಕ್ಕಾ ಮನುಷ್ಯನನ್ನೇ ಹೋಲುತ್ತದೆ.

ಮ್ಯಾನ್ ಫೇಸ್ಡ್ ಬಗ್ ಎಂದು ಕರೆಯಲ್ಪಡುವ ಈ ಕೀಟ ಭಾರತ ಸಹಿತ ದಕ್ಷಿಣ ಏಷ್ಯಾ ರಾಷ್ಟ್ರಗಳ ಕರಾವಳಿಯಲ್ಲಿ ಅಪರೂಪಕ್ಕೆ ಕಂಡು ಬರುತ್ತವೆ. ಕೆಂಪು, ಹಳದಿ , ಕಿತ್ತಳೆ, ಕಂದು ಬಣ್ಣ ಮಿಶ್ರಿತ  ಈ ಕೀಟ ಹೆಚ್ಚಾಗಿ ಗಿಡಗಳಲ್ಲಿ ಕಂಡುಬರುತ್ತವೆ.

ಸೆಖೆ ವಿಪರೀತ ಇರುವ ಫೆಬ್ರವರಿಯಿಂದ ಮೇ ತನಕದ ಅವಧಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಕೀಟವು ಚಿಗುರು, ಕಾಂಡ, ಹಣ್ಣಿನಿಂದ ರಸ ಹೀರುತ್ತವೆ. ತಾಳೆ ಗರಿಗಳಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಆಟವಾಡುವ ಮ್ಯಾನ್ ಫೇಸ್ಡ್ ಬಗ್ ನಿರುಪದ್ರವಿ. ರೈತರು ಯಾವುದೇ ರೀತಿಯಲ್ಲೂ  ಗಾಬರಿಯಾಗಬೇಕಿಲ್ಲ, ಕೃಷಿಗೂ ಯಾವ ಹಾನಿಯನ್ನೂ ಮಾಡೋದಿಲ್ಲ. ಗಂಡು ಗಾತ್ರದಲ್ಲಿ ಚಿಕ್ಕದಾದರೆ, ಹೆಣ್ಣು ಸ್ವಲ್ಪ ದೊಡ್ಡದು. ಕಳೆ ಗಿಡಗಳಲ್ಲಿ ಹೆಚ್ಚಾಗಿರುವ ಈ ಕೀಟಗಳು ಗುಂಪಲ್ಲಿ ಮೊಟ್ಟೆ ಇಡುತ್ತವೆ. 25ರಿಂದ 30 ದಿನವಷ್ಟೇ ಇದರ ಅಯುಷ್ಯ.

- Advertisement -
spot_img

Latest News

error: Content is protected !!