Wednesday, July 15, 2026
Homeಕರಾವಳಿಮಂಗಳೂರುಪುತ್ತೂರು; ಟ್ರಕ್ಕಿಂಗ್ ಹೋಗಿದ್ದ ಯುವಕ ಜಾರಿ ಬಿದ್ದು ಗಾಯಗೊಂಡು ಸಾವು

ಪುತ್ತೂರು; ಟ್ರಕ್ಕಿಂಗ್ ಹೋಗಿದ್ದ ಯುವಕ ಜಾರಿ ಬಿದ್ದು ಗಾಯಗೊಂಡು ಸಾವು

- Advertisement -
- Advertisement -

ಪುತ್ತೂರು; ಟ್ರಕ್ಕಿಂಗ್ ಹೋಗಿದ್ದ ಯುವಕ ಜಾರಿ ಬಿದ್ದು ಗಾಯಗೊಂಡು ಸಾವನ್ನಪ್ಪಿರುವ ಘಟನೆ ಮೂಡಬಿದ್ರೆ ಸಮೀಪದ ಕೊಣಾಜೆಕಲ್ಲು ಗುಡ್ಡದಲ್ಲಿ ಸೆಪ್ಟಂಬರ್ 17 ರಂದು ಬೆಳಗ್ಗೆ ನಡೆದಿದೆ.

ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಟ್ಟಂಪಾಡಿ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಎಂಬವರ ಪುತ್ರ ಮನೋಜ್ ಎನ್. (22) ಮೃತ ಯುವಕ.


ಮನೋಜ್ ತನ್ನ ಸ್ನೇಹಿತ ಕಾರ್ತಿಕ್  ಜೊತೆ ಕೊಣಾಜೆಕಲ್ಲು ಗುಡ್ಡಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ಟ್ರೆಕ್ಕಿಂಗ್ ವೇಳೆ ಮನೋಜ್ ಆಕಸ್ಮಿಕವಾಗಿ ಜಾರಿ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ

- Advertisement -

Latest News

error: Content is protected !!