Tuesday, June 23, 2026
Homeಚಿಕ್ಕಮಗಳೂರುಮಾಜಿ ಲವರ್ ಗೆ ಸೋಷಿಯಲ್ ಮೀಡಿಯಾದಲ್ಲಿ ಬರ್ತಡೇ ವಿಶ್ ಮಾಡಿದ ಯುವಕನ ಬರ್ಬರ ಹತ್ಯೆ

ಮಾಜಿ ಲವರ್ ಗೆ ಸೋಷಿಯಲ್ ಮೀಡಿಯಾದಲ್ಲಿ ಬರ್ತಡೇ ವಿಶ್ ಮಾಡಿದ ಯುವಕನ ಬರ್ಬರ ಹತ್ಯೆ

- Advertisement -
- Advertisement -

ಚಿಕ್ಕಮಗಳೂರು: ಮಾಜಿ ಲವರ್ ಗೆ ಸೋಷಿಯಲ್ ಮೀಡಿಯಾದಲ್ಲಿ ಬರ್ತಡೇ ವಿಶ್ ಮಾಡಿದ ಯುವಕನನ್ನು ಯುವತಿಯ ಅಣ್ಣ ಹಾಗೂ ಎಂಗೇಜ್ ಮೆಂಟ್ ಆದ ಯುವಕ ಸೇರಿ ಬರ್ಬರ ಹತ್ಯೆ ಮಾಡಿರುವ ಘಟನೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದೆ. ಉಡೇವಾ ಗ್ರಾಮದ ಮಂಜುನಾಥ್ (28) ಮೃತ ದುರ್ದೈವಿ.

 ಮೃತ ಮಂಜು ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಆಕೆಯ ಮನೆಯವರು ಆತ ಬೇಡ ಅಂತ ವೇಣು ಎಂಬ ಬೇರೆ ಹುಡುಗನ ಜೊತೆ ಆಕೆಯ ಮದುವೆಯನ್ನ ನಿಶ್ಚಯ ಮಾಡಿದ್ದರು. ಆದರೆ, ಕಳೆದ 2 ದಿನಗಳ ಹಿಂದೆ ಆಕೆಯ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದ. ಇದರಿಂದ ಕೆರಳಿದ ಯುವತಿಯ ಅಣ್ಣ ಹಾಗೂ ನಿಶ್ಚಿತಾರ್ಥ ಮಾಡಿಕೊಂಡು ಯುವಕ ಮಂಜುಗೆ ಕರೆ ಮಾಡಿ ಕರೆಸಿಕೊಂಡು ಮಾತನಾಡುವಾಗ ಚಾಕು ಇರಿದಿದ್ದಾರೆ. ಕೂಡಲೇ ಆತನನ್ನ ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

- Advertisement -

Latest News

error: Content is protected !!