Sunday, June 7, 2026
Homeಕರಾವಳಿಸುಳ್ಯ;ಕೊಲ್ಲಮೊಗ್ರದ ಯುವಕ ಬೆಂಗಳೂರಿನಲ್ಲಿ ಅಪಘಾತಕ್ಕೆ ಬಲಿ

ಸುಳ್ಯ;ಕೊಲ್ಲಮೊಗ್ರದ ಯುವಕ ಬೆಂಗಳೂರಿನಲ್ಲಿ ಅಪಘಾತಕ್ಕೆ ಬಲಿ

- Advertisement -
- Advertisement -

ಸುಳ್ಯ; ಕೊಲ್ಲಮೊಗ್ರದ ಯುವಕನೊಬ್ಬ ಬೆಂಗಳೂರಿನಲ್ಲಿ ಅಪಘಾತಕ್ಕೆ ಬಲಿಯಾದ ಘಟನೆ ಏ.24 ರಂದು ನಡೆದಿದೆ.ಕೊಲ್ಲಮೊಗ್ರ ಧರ್ಮಪಾಲ ಗೌಡ ಬಾಳೆಬೈಲು ಮತ್ತು ವಿಮಲಾಕ್ಷಿ ದಂಪತಿ ಪುತ್ರ ಯತೀಶ್ ಬಾಳೆಬೈಲು(30) ಮೃತ ದುರ್ದೈವಿ.

ನಿನ್ನೆ ಬೆಳಿಗ್ಗೆ ಯತೀಶ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಯತೀಶ್ ರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಯತೀಶ್ ಅವರು ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಉದ್ಯೋಗದಲ್ಲಿದ್ದರು. ಮೃತರು ತಂದೆ ತಾಯಿ, ಸಹೋದರ, ಸಹೋದರಿ, ಬಂಧುಮಿತ್ರರನ್ನು ಅಗಲಿದ್ದಾರೆ

- Advertisement -

Latest News

error: Content is protected !!