Wednesday, June 24, 2026
Homeಅಪರಾಧಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವು

ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವು

- Advertisement -
- Advertisement -

ಮಾಣಿ: ಉಪ್ಪಿನಂಗಡಿಯಲ್ಲಿ ಮಹಿಳೆಯೋರ್ವರು ಬಸ್ಸಿನಿಂದ ಹೊರಗೆಸೆಯಲ್ಪಟ್ಟು, ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮಗುವನ್ನೆತ್ತಿಕೊಂಡು ಬಂದ ಮಹಿಳೆಯೋರ್ವರಿಗೆ ತನ್ನ ಸೀಟು ಬಿಟ್ಟು ಕೊಟ್ಟು ನಿಂತಿದ್ದ ವೇಳೆ ಬಸ್ಸಿನಿಂದ ಹೊರಗೆಸೆಯಲ್ಪಟ್ಟು, ಗಂಭೀರವಾಗಿ ಗಾಯಗೊಂಡಿದ್ದರು. ಮೃತಪಟ್ಟ ಮಹಿಳೆ ನಿನ್ನಿಕಲ್ಸ್ ನಿವಾಸಿ ಶ್ರೀಮತಿ ರಾಧಾ (66).

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದಾರೂ, ಅವರ ದೇಹಾರೋಗ್ಯದಲ್ಲಿ ಯಾವುದೇ ಬೆಳವಣಿಗೆ ಕಾಣಿಸದ ಕಾರಣ ಬುಧವಾರ ಮನೆಗೆ ಕರೆತರಲಾಗಿತ್ತು. ರಾಧಾ ಅವರು ಮನೆ ತಲುಪುತ್ತಿದ್ದಂತೆಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಅವರು ಜ.31ರಂದು ಕಾರ್ಯನಿಮಿತ್ತ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಗುವನ್ನೆತ್ತಿಕೊಂಡು ಬಂದ ಮಹಿಳೆಯೋರ್ವರಿಗೆ ತನ್ನ ಸೀಟು ಬಿಟ್ಟು ಕೊಟ್ಟು ನಿಂತಿದ್ದ ವೇಳೆ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆಸೆಯಲ್ಪಟ್ಟು, ಗಂಭೀರವಾಗಿ ಗಾಯಗೊಂಡಿದ್ದರು.

ಇವರ ಪತಿ ಕೆಲ ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಶ್ರೀ ಮಾಧವ ಶಿಶು ಮಂದಿರದ ಮಾತೃ ಮಂಡಳಿ, ವನಿತಾ ಭಜನಾ ಮಂಡಳಿ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

- Advertisement -

Latest News

error: Content is protected !!