Wednesday, June 24, 2026
HomeWorldಮಹಿಳೆಯೊಬ್ಬರು ಮಹೀಂದ್ರಾ ಥಾರ್ ಪೂಜೆ ಮಾಡುತ್ತಿದ್ದ ವೇಳೆ ನಡೆದ ಭಾರೀ ಅವಘಡ: ಶೋರೂಮ್‌ನ ಮೊದಲ ಮಹಡಿಯಿಂದ...

ಮಹಿಳೆಯೊಬ್ಬರು ಮಹೀಂದ್ರಾ ಥಾರ್ ಪೂಜೆ ಮಾಡುತ್ತಿದ್ದ ವೇಳೆ ನಡೆದ ಭಾರೀ ಅವಘಡ: ಶೋರೂಮ್‌ನ ಮೊದಲ ಮಹಡಿಯಿಂದ ಕೆಳಗೆ ಬಿದ್ದ ಹೊಸ ಕಾರು

- Advertisement -
- Advertisement -

ದೆಹಲಿ: ಮಾನಿ ಪವಾರ್ ಎಂಬ ಮಹಿಳೆ ಹೊಸ ಮಹೀಂದ್ರಾ ಥಾರ್ ಕಾರನ್ನು ಖರೀದಿಸಿದ್ದು, ಮಹಿಳೆ ಶೋರೂಮ್ ನಲ್ಲೇ ಪೂಜೆ ಮಾಡುವ ಸಲುವಾಗಿ ನಿಂಬೆಹಣ್ಣಿನ ಮೇಲೆ ಹೊಸ ಕಾರನ್ನು ಚಲಾಯಿಸಲು ಯತ್ನಿಸಿದ್ದಾರೆ. ಆದರೆ ಈ ಸಂಧರ್ಭದಲ್ಲಿ ಕಾರು ನೇರವಾಗಿ ಶೋರೂಮ್‌ನ ಮೊದಲ ಮಹಡಿಯಿಂದ ಕೆಳಗೆ ಬಿದ್ದು ಭಾರೀ ಅನಾಹುತ ಉಂಟಾದ ಘಟನೆ ನಡೆದಿದೆ.

ಈ ಘಟನೆಯು ದೆಹಲಿಯ ಮಹೀಂದ್ರಾ ಶೋರೂಮ್‌ ನಲ್ಲಿ ನಡೆದಿದೆ ಎನ್ನಲಾಗಿದೆ.

ಮಾನಿ ಪವಾರ್ ಅವರು ರೂ.27 ಲಕ್ಷ ಮೌಲ್ಯದ ಥಾರ್ ಕಾರಿನ ಡೆಲಿವರಿ ಪಡೆದಿದ್ದು, ಭಾರತೀಯ ಸಂಪ್ರದಾಯದಂತೆ ಕಾರಿನ ಮುಂದೆ ನಿಂಬೆಹಣ್ಣನ್ನು ಇಟ್ಟು ಪೂಜೆ ಮಾಡುವ ಸಲುವಾಗಿ ಕಾರಿನ ಚಕ್ರದ ಕೆಳಗೆ ನಿಂಬೆ ಹಣ್ಣಿಟ್ಟು ಆಕ್ಸಿಲರೇಟ‌ರ್ ಮೇಲೆ ಕಾಲು ಒತ್ತಿದ ಪರಿಣಾಮ, ಕಾರು ನೇರವಾಗಿ ಗಾಜಿನ ತಡೆ ದಾಟಿ ಕೆಳ ಮಹಡಿಗೆ ಬಿದ್ದಿದೆ. ಇನ್ನು ಕಾರಿನ ಒಡತಿಯೊಂದಿಗೆ ಮತ್ತೊಬ್ಬ ವ್ಯಕ್ತಿ ವಿಕಾಸ್ ಇದ್ದು ಸಮಯ ಪ್ರಜ್ಞೆ ಯಿಂದ ಇಬ್ಬರೂ ಕೂಡ ಕಾರಿನ ಗಾಜನ್ನು ಒಡೆದು ಹೊರ ಬಂದು ತಮ್ಮ ಜೀವ ಉಳಿಸಿಕೊಂಡಿದ್ದಾರೆ ಎಂಬುದಾಗಿ ವರದಿಯಾಗಿದೆ.

ಘಟನೆಯ ದೃಶ್ಯಭೀತಿಕರವಾಗಿತ್ತು ಎನ್ನಲಾಗಿದೆ. ಕಾರಿನ ಮುಂಭಾಗ ಸಂಪೂರ್ಣ ಹಾನಿಗೊಂಡಿದ್ದು, ಶೋರೂಮ್‌ನ ಒಳಚರಂಡಿ ಹಾಗೂ ಗಾಜಿನ ತಟಗಳು ಸಂಪೂರ್ಣ ಚಿಂಧಿಯಾಗಿವೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!