- Advertisement -
- Advertisement -
ಮೇ 24ರಿಂದ ಬ್ರಹ್ಮಾವರದ ಹಲುವಳ್ಳಿಯ ಕೊಂಟಿಬೈಲಿನ ಸುಜಾತಾ ಶೆಟ್ಟಿ (39)ಅವರು ಕಾಣೆಯಾಗಿದ್ದಾರೆ.
ಸುಮಾರು 16 ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಅವರು ಈ ಹಿಂದೆ ಹಲವು ಬಾರಿ ಮನೆ ಬಿಟ್ಟು ಹೋಗಿ ಸಂಬಂಧಿಕರ ಮನೆಯಲ್ಲಿ ಉಳಿದು 2, 3 ದಿನಗಳ ಅನಂತರ ಮರಳುತ್ತಿದ್ದರು.
ಮೇ 24ರ ಸಂಜೆ ಮನೆಯಿಂದ ಹೋದವರು ಇದುವರೆಗೆ ವಾಪಸಾಗಿಲ್ಲ. ಕಂದು ಬಿಳಿ ಬಣ್ಣದ ಚೂಡಿದಾರ್, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದು, ಕಾಲಿನಲ್ಲಿ ಕತ್ತಿಯ ಗಾಯದ ಗುರುತು ಇದೆ. ಇವರ ಕುರಿತು ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಠಾಣೆ (0820-2561044) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
- Advertisement -