Friday, May 17, 2024
Homeಕರಾವಳಿಪುತ್ತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು

ಪುತ್ತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು

spot_img
- Advertisement -
- Advertisement -

ಪುತ್ತೂರು: ಬೆಳ್ತಂಗಡಿಯ ಮಹಿಳೆಯೊಬ್ಬರು ಪುತ್ತೂರು ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆ ತವರು ಮನೆಯಲ್ಲಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಎ. 10 ರಂದು ನಡೆದ ಬಗ್ಗೆ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಪುದುಬೆಟ್ಟು ಉದ್ದದಪಳಿಕೆ ಪುರುಷೋತ್ತಮ ಎಂಬುವವರ ಪತ್ನಿ ಪುಣ್ಯಶ್ರೀ ಎಂಬುವವರು ಬಾವಿಗೆ ಬಿದ್ದು ಮೃತಪಟ್ಟವರು. ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆಯ ಬಾಲಕೃಷ್ಣ ಎಂಬುವವರು ತನ್ನ ಪುತ್ರಿ ಪುಣ್ಯಶ್ರೀಯವರನ್ನು 2017ರ ಜ.1ಕ್ಕೆ ಬೆಳ್ತಂಗಡಿಯ ಪುರುಷೋತ್ತಮ ಎಂಬುವರಿಗೆ ವಿವಾಹ ಮಾಡಿಸಿದ್ದರು. ಪುರುಷೋತ್ತಮ ಮತ್ತು ಪುಣ್ಯಶ್ರೀ ದಂಪತಿಗೆ ಇಬ್ಬರು ಮಕ್ಕಳಿದ್ದರು. ಎ.4 ರಂದು ತವರು ಮನೆಗೆ ಪುಣ್ಯಶ್ರೀಯವರು ಬಂದಿದ್ದರು.

ಎ.10 ರಂದು ಪುಣ್ಯಶ್ರೀಯವರು ತನ್ನ ಗಂಡ ಪುರುಷೋತ್ತಮ ಅವರಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದರು. ರಾತ್ರಿ ವೇಳೆ ಪುಣ್ಯಶ್ರೀಯವರು ಚಿಕ್ಕಮ್ಮ ಲತಾ ಅವರ ಮೊಬೈಲ್‌ಗೆ ಕರೆ ಮಾಡಿ ತಾನು ಸಾಯುವ ಕುರಿತು ಹೇಳಿ ಮನೆಯ ಬಳಿಯ ಬಾವಿಗೆ ಹಾರಿದ್ದರು. ಈ ಕುರಿತು ಮಾಹಿತಿ ಅರಿತು ಪುಣ್ಯಶ್ರೀಯವರನ್ನು ಬಾವಿಯಿಂದ ಮೇಲಕ್ಕೆತ್ತಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಆಗಲೇ ಅವರು ಮೃತಪಟ್ಟಿದ್ದರು. ಘಟನೆ ಕುರಿತು ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!