- Advertisement -
![]()
- Advertisement -
ಉಡುಪಿ: ಇಂಜೆಕ್ಷನ್ ಹಾಕಿಸಿದ ಬಳಿಕ ಜ್ವರ ಕಾಣಿಸಿಕೊಂಡು ಎರಡೂವರೆ ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಯಡಾಡಿ-ಮತ್ಯಾಡಿಯ ನಾಲ್ಲೂರು ಗುಡ್ಡೆಯಂಗಡಿಯಲ್ಲಿ ಜ. 13ರಂದು ನಡೆದಿದೆ.ಇಲ್ಲಿನ ನಿವಾಸಿ ಗುರುರಾಜ್ ಅವರ ಗಂಡು ಮಗುವಿಗೆ ಜ. 10ರಂದು ಎರಡೂವರೆ ತಿಂಗಳ ಇಂಜೆಕ್ಷನ್ ಕೊಡಿಸಲಾಗಿತ್ತು.ಸಂಜೆ ವೇಳೆಗೆ ಜ್ವರ ಬಂದಿದ್ದು ಔಷಧ ನೀಡಿದಾಗ ಸ್ವಲ್ಪ ಕಡಿಮೆ ಆಗಿತ್ತು.
ಜ. 13ರಂದು ಮತ್ತೆ ಜ್ವರ ಉಲ್ಬಣಿಸಿದ್ದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


