ಚಿಕ್ಕಮಗಳೂರು :ಜೈಲಿನಲ್ಲಿರುವ ನಕ್ಸಲ್ ಅಂಗಡಿ ಸುರೇಶ್ ತನ್ನ ಪತ್ನಿ ಸದ್ಯ ಶರಣಾಗಿರುವ ನಕ್ಸಲ್ ವನಜಾಕ್ಷಿ ಗೆ ಮುಖ್ಯ ವಾಹಿನಿಗೆ ಬರಲು ಬರೆದಿರುವ ಪತ್ರ ಇದೀಗ ವೈರಲ್ ಆಗಿದೆ.
:ಜೈಲಿನಲ್ಲಿರುವ ನಕ್ಸಲ್ ಅಂಗಡಿ ಸುರೇಶ್ ನವೆಂಬರ್ ಎರಡನೇ ವಾರ ಜೈಲಿನಿಂದ ವನಜಾಕ್ಷಿಗೆ ಬರೆದ ಪತ್ರ ಇದೀಗ ವೈರಲ್ ಆಗಿದ್ದು. ಅಲ್ಲದೇ ಕಾಡಿನ ನಿವಾಸಿಗಳ ಮೂಲಕ ಪತ್ರ ವನಜಾಕ್ಷಿ ಗೆ ಸಿಕ್ಕಿದ ಬಳಿಕ ಆಕೆ ಶರಣಾಗತಿಗೆ ನಿರ್ಧಾರ ಮಾಡಿದ್ದು ಎನ್ನಲಾಗಿದೆ. ಸುರೇಶ್ ಅಂಗಡಿ ಹಾಗೂ ವನಜಾಕ್ಷಿ ಕಾಡಿನಲ್ಲಿ ಮದುವೆಯಾಗಿದ್ದರು.

ನಕ್ಸಲ್ ಸುರೇಶ್ ಸುಳಿವು ಕೊಟ್ಟವರಿಗೆ ಘೋಷಣೆಯಾಗಿತ್ತು 5 ಲಕ್ಷ ರೂ. ಬಹುಮಾನ: ಬಂಧಿತ ಸುರೇಶ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವ. ಕಳೆದ 20 ವರ್ಷಗಳಿಂದ ಭೂಗತನಾಗಿದ್ದನು. ಇನ್ನು ರಾಜ್ಯದಲ್ಲಿ ನಕ್ಸಲ್ ನಿಗ್ರಹ ಮಾಡಿದ ನಂತರ ಅಂಗಡಿ ಸುರೇಶನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಎಲ್ಲಿಯೂ ಸಿಗದ ಹಿನ್ನೆಲೆಯಲ್ಲಿ ಸುರೇಶ್ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಣೆಯನ್ನೂ ಮಾಡಿತ್ತು. ಇನ್ನು ಕೇರಳ-ಕರ್ನಾಟಕ ಗಡಿ ಪ್ರದೇಶದ ಅರಣ್ಯದಲ್ಲಿ ಸುರೇಶ್ ಅಡಗಿದ್ದನು.
ಸುರೇಶ್ ಪತ್ತೆಗೆ ಪೊಲೀಸರಿಗೆ ಆನೆ ಸಹಾಯ ಮಾಡಿದ್ಹೇಗೆ?
ಕರ್ನಾಟಕಕ್ಕೆ ಬೇಕಾಗಿದ್ದ ನಕ್ಸಲ್ ಅಂಗಡಿ ಸುರೇಶ್ ಕಳೆದ 20 ವರ್ಷಗಳಿಂದ ಭೂಗತನಾಗಿದ್ದನು ಕೇರಳದ ಕಾಡಿನಲ್ಲಿವೇ ವಾಸವಾಗಿದ್ದನು. ಆದರೆ, ಕಣ್ಣೂರು ಅರಣ್ಯದ ನಕ್ಸಲ್ ಕ್ಯಾಂಪ್ ಮೇಲೆ ಕಾಡಾನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ ನಕ್ಸಲ್ ಸುರೇಶ್‌ನ ಕಾಲು ಮುರಿದಿದೆ. ನಂತರ, ನಕ್ಸಲರು ಸುರೇಶ್‌ನನ್ನು ಕಾಡಂಚಿನ ಗ್ರಾಮದ ಬಳಿ ಬಿಟ್ಟು ಹೋದಾಗ ಆತನ ನೋವನ್ನು ನೋಡಿ ಸ್ಥಳೀಯರು ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಸುರೇಶ್ ನಕ್ಸಲ್ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಫೆ. 6 2024 ದು ಆತನನ್ನು ವಶಕ್ಕೆ ಪಡೆದಿದ್ದರು. ಅಂಗಡಿ ಸುರೇಶ್ ಮೇಲೆ ಕರ್ನಾಟಕದಲ್ಲಿ 61 ಕೇಸ್ ಇದೆ.

ಸದ್ಯ ಜೈಲಿನಲ್ಲಿರುವ ಅಂಗಡಿ ಸುರೇಶ್ ಪತ್ನಿ ನಕ್ಸಲ್ ವನಜಾಕ್ಷಿಗೆ ಬರೆದ ಪತ್ರ ಈಗ ವೈರಲ್ ಆಗಿದೆ.ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಸಮಿತಿಯ ಪ್ರಯತ್ನದಿಂದ ಶರಣಾಗತಿ ಮಾಡಲು ಈ ರೀತಿಯ ಸಂದೇಶ ರವಾನೆ ಮಾಡಿಸಲಾಗಿತ್ತು