Saturday, June 20, 2026
Homeಕರಾವಳಿಮಂಗಳೂರುಶಿರಾಡಿ ಘಾಟ್ ನಲ್ಲಿ ಸಂಚರಿಸುತ್ತಿದ್ದ ಲಾರಿಯೊಂದು ಬೆಂಕಿಗಾಹುತಿ

ಶಿರಾಡಿ ಘಾಟ್ ನಲ್ಲಿ ಸಂಚರಿಸುತ್ತಿದ್ದ ಲಾರಿಯೊಂದು ಬೆಂಕಿಗಾಹುತಿ

- Advertisement -
- Advertisement -

ಕಡಬ; ಶಿರಾಡಿ ಘಾಟ್ ನಲ್ಲಿ ಸಂಚರಿಸುತ್ತಿದ್ದ ಲಾರಿಯೊಂದು ಬೆಂಕಿಗಾಹುತಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮಂಗಳೂರು ಭಾಗದಿಂದ ಬೆಂಗಳೂರು ಹಾಗೂ ಆಂಧ್ರಪ್ರದೇಶದ ಕಡೆಗೆ ಬಾಕ್ಸೈಟ್ ಸಾಗಿಸುತ್ತಿದ್ದ ಲಾರಿಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಾರಿ ಚಾಲಕ ಲಾರಿಯಿಂದ ಹಾರಿ ಅಪಾಯದಿಂದ ಪಾರಾಗಿದ್ದಾನೆ. ಡಿಸೇಲ್ ಟ್ಯಾಂಕ್ ನಿಂದ ರಸ್ತೆಯ ತುಂಬಾ ಡಿಸೇಲ್ ಚೆಲ್ಲಿದ್ದು, ಆ ಡಿಸೇಲ್ ಗೆ ಬೆಂಕಿ ತಗುಲಿ ಲಾರಿಗೆ ಆವರಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಡೀಸೆಲ್ ಲಾರಿಯಿಂದ ಹೇಗೆ ಲೀಕ್ ಆಯಿತು ಮತ್ತು ಬೆಂಕಿ ಹೇಗೆ ಹಚ್ಚಿಕೊಂಡಿತು ಅನ್ನೋದು ಮಾತ್ರ ನಿಗೂಢವಾಗಿದ್ದು, ಉಪ್ಪಿನಂಗಡಿ ಪೋಲೀಸರು ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!