Saturday, June 20, 2026
HomeWorldಕದನ ವಿರಾಮ ಜಾರಿಯಾದ ಕೆಲವೇ ಗಂಟೆಗಳಲ್ಲಿ ಲೆಬನಾನ್ ಮೇಲೆ ಇಸ್ರೇಲ್ ಡ್ರೋನ್ ದಾಳಿ: ಭೀಕರ ದಾಳಿಯಲ್ಲಿ...

ಕದನ ವಿರಾಮ ಜಾರಿಯಾದ ಕೆಲವೇ ಗಂಟೆಗಳಲ್ಲಿ ಲೆಬನಾನ್ ಮೇಲೆ ಇಸ್ರೇಲ್ ಡ್ರೋನ್ ದಾಳಿ: ಭೀಕರ ದಾಳಿಯಲ್ಲಿ 5 ಜನ ಸಾವು

- Advertisement -
- Advertisement -

ಬೈರುತ್: ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಘಟನೆಗಳ ನಡುವೆ ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ, ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಮತ್ತೆ ಭೀಕರ ಡ್ರೋನ್ ದಾಳಿ ನಡೆಸಿದ್ದು, ಐದು ಜನರು ಮೃತಪಟ್ಟಿದ್ದಾರೆ.

ಅಮೆರಿಕ ಹಾಗೂ ಕತಾರ್ ದೇಶಗಳ ಮಧ್ಯಸ್ಥಿಕೆಯಲ್ಲಿ, ಇರಾನ್‌ನ ಸಹಕಾರದೊಂದಿಗೆ ಈ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿರುವುದಾಗಿ ಅಮೆರಿಕ ಅಧಿಕಾರಿಗಳು ಶುಕ್ರವಾರವಷ್ಟೇ ತಿಳಿಸಿದ್ದರು. ಆದರೆ, ಈ ಶಾಂತಿ ಒಪ್ಪಂದದ ಬೆನ್ನಲ್ಲೇ ಇಸ್ರೇಲಿ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಶನಿವಾರ ಬೆಳಗಿನ ಜಾವದವರೆಗೆ ನಬತಿಯೇಹ್ ಪ್ರದೇಶದ ವಸತಿ ಕಟ್ಟಡಗಳು ಹಾಗೂ ಮನೆಗಳ ಮೇಲೆ ಸರಣಿ ದಾಳಿಗಳನ್ನು ಮುಂದುವರಿಸಿರುವುದಾಗಿ ಲೆಬನಾನ್ ಸರ್ಕಾರ ಹೇಳಿದೆ.

ಒಪ್ಪಂದ ಜಾರಿಯಾದ ತಕ್ಷಣವೇ ಈ ದಾಳಿ ನಡೆದಿರುವುದರಿಂದ ಗಡಿ ಭಾಗದಲ್ಲಿ ಆತಂಕ ಮತ್ತಷ್ಟು ತೀವ್ರಗೊಂಡಿದೆ.

- Advertisement -

Latest News

error: Content is protected !!