- Advertisement -
- Advertisement -
ಕೇರಳ: ನಿಫಾ ಸೋಂಕು ತಗುಲಿದ್ದ 12 ವರ್ಷದ ಬಾಲಕನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಶಂಕಿಸಲಾಗಿದ್ದ 61 ಮಂದಿಗೆ ನೆಗಿಟಿವ್ ವರದಿ ಬಂದಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. 15 ಮಂದಿಯ ಸ್ಯಾಂಪಲ್ ವರದಿ ಕೈ ಸೇರಿದ್ದು ಎಲ್ಲರೂ ನೆಗೆಟಿವ್ ಹೊಂದಿರುವುದು ದೃಢಪಟ್ಟಿದೆ. ಹೀಗಾಗಿ ಸೋಂಕಿತ ಬಾಲಕನೊಂದಿಗೆ ಸಂಪರ್ಕ ಹೊಂದಿದ್ದ 61 ಮಂದಿಯ ವರದಿಯೂ ನಕಾರಾತ್ಮಕವಾಗಿರುವುದು ತಿಳಿದುಬಂದಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಇನ್ನು 64 ಮಂದಿಯ ವರದಿ ಕೈಸೇರಬೇಕಿದ್ದು ಎಲ್ಲ ಶಂಕಿತರು ಕೋಳಿಕೋಡ್ ಮೆಡಿಕಲ್ ಕಾಲೇಜಿನಲ್ಲಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ನಿನ್ನೆಯವರೆಗೂ 46 ಮಂದಿಗೆ ನೆಗೆಟಿವ್ ವರದಿ ಬಂದಿತ್ತು. ಇದೀಗ ಮತ್ತೆ 15 ಮಂದಿಯ ವರದಿ ನೆಗೆಟಿವ್ ಆಗಿರುವುದರಿಂದ ಉಳಿದವರ ವರದಿಯೂ ನೆಗೆಟಿವ್ ಇರುವ ಸಾಧ್ಯತೆ ಇರುವುದರಿಂದ ಯಾರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಅವರು ಆಭಯ ನೀಡಿದ್ದಾರೆ.
- Advertisement -