ತೆಲಂಗಾಣ; ಬಾರ್ ನಲ್ಲಿ ಕಳ್ಳತನಕ್ಕೆ ಹೋಗಿ, ಚೆನ್ನಾಗಿ ಕುಡಿದು ಕಳ್ಳನೊಬ್ಬ ನಿದ್ದೆಗೆ ಜಾರಿದ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ನರಸಿಂಗ್ ಮಂಡಲದಲ್ಲಿ ನಡೆದಿದೆ.
ನರಸಿಂಗ್ ಮಂಡಲದ ಕನಕದುರ್ಗ ವೈನ್‌ನ ಮ್ಯಾನೇಜರ್ ಭಾನುವಾರ ರಾತ್ರಿ ಕೆಲಸ ಮುಗಿಸಿ ಅಂಗಡಿಗೆ ಬೀಗ ಹಾಕಿ ತೆರಳಿದ್ದರು. ಸೋಮವಾರ ಬೆಳಗ್ಗೆ ಅಂಗಡಿ ತೆರೆದಾಗ ಮದ್ಯದಂಗಡಿಯಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಮಲಗಿರುವುದು ನೌಕರರು ನೋಡಿದ್ದಾರೆ. ಅತಿಯಾಗಿ ಮದ್ಯ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಮದ್ಯದಂಗಡಿಗೆ ನುಗ್ಗಿದ ವ್ಯಕ್ತಿ ಕಳಳ ಫಾಯಿಲ್ ತೆಗೆದು ಹಣ ಹಾಗೂ ಮದ್ಯದ ಬಾಟಲಿಗಳನ್ನೆಲ್ಲ ಪ್ಯಾಕ್ ಮಾಡಿದ್ದ.
ಅಷ್ಟರಲ್ಲಿ ಇಲ್ಲೇ ಸ್ವಲ್ಪ ಕುಡಿದ್ರೆ ಚೆನ್ನಾಗಿರುತ್ತೆ ಎಂದುಕೊಂಡ ಕಳ್ಳ ಫಾಯಿಲ್ ಅಲ್ಲಿಯೇ ಮದ್ಯ ಸೇವಿಸಲು ಆರಂಭಿಸಿದ್ದಾನೆ. ಅತಿಯಾಗಿ ಮದ್ಯ ಸೇವಿಸಿದ ಬಳಿಕ ನಶೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದಾದ ಬಳಿಕ ಬೆಳಗ್ಗೆ ಅಂಗಡಿ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ. ಅಂಗಡಿ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಂಗಡಿಗೆ ಕಳ್ಳ ನುಗ್ಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.