Monday, June 8, 2026
Homeಕರಾವಳಿಉಡುಪಿಕುಂದಾಪುರ: ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ್ದ ಕಳ್ಳ ಅರೆಸ್ಟ್

ಕುಂದಾಪುರ: ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ್ದ ಕಳ್ಳ ಅರೆಸ್ಟ್

- Advertisement -
- Advertisement -

ಕುಂದಾಪುರ: ಮನೆಗೆ ನುಗ್ಗಿ ಹಣ ಹಾಗೂ ಚಿನ್ನಾಭರಣ ಕದ್ದ ಆರೋಪಿಯನ್ನು ಕುಂದಾಪುರ ನಗರ ಠಾಣೆ ಪೊಲೀಸರು ಆ.10 ರಂದು ಗೋಪಾಡಿ ಸಮೀಪ ಬಂಧಿಸಿದ್ದಾರೆ.

ಕುಂಭಾಶಿ ವಿನಾಯಕ ನಗರದ ನಿವಾಸಿ ಸುಭಾಶ್ಚಂದ್ರ ಆಚಾರ್ಯ (40) ಬಂಧಿತ. ಈತನಿಂದ ಕದ್ದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಕೊಂಡಿದ್ದಾರೆ.

ಕುಂಭಾಶಿಯ ವಿನಾಯಕ ನಗರದ ಮಂಜುನಾಥ ಜೋಗಿ ಎಂಬುವವರ ಮನೆಯಲ್ಲಿ ಜು. 29 ರಂದು ಕಳ್ಲತನ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಲೆ ಮನೆಯ ಹಿಂಬದಿಯ ಬಾಗಿಲು ಒಡೆದು ಆರೋಪಿ ಕಳ್ಳತನ ಎಸಗಿದ್ದ.

- Advertisement -

Latest News

error: Content is protected !!