- Advertisement -
![]()
- Advertisement -
ಬಂಟ್ವಾಳ: ವ್ಯಕ್ತಿಯೊಬ್ಬ ವಿದ್ಯುತ್ ದುರಸ್ಥಿಗೆಂದು ಮನೆಗೆ ಬಂದು ಚಿನ್ನಾಭರಣ, ನಗದು ದೋಚಿದ ಘಟನೆ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದಲ್ಲಿ ನಡೆದಿದೆ.
ಸಜೀಪನಡು ಗ್ರಾಮದ ದೇರಾಜೆಯ ದೀಕ್ಷಿತ್ ಅವರ ಮನೆ ಮಂದಿ ಸರೋಜಿನಿ ಎಂಬ ಮಹಿಳೆಯನ್ನು ನಿಲ್ಲಿಸಿ ಪಾಣೆಮಂಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಿದ್ದರು. ಮಧ್ಯಾಹ್ನ 2 ರ ಸುಮಾರಿಗೆ ಮನೆಗೆ ಬಂದ ಅಪರಿಚಿತ ವ್ಯಕ್ತಿ ದೀಕ್ಷಿತ್ ಅವರು ಮನೆಯ ವಿದ್ಯುತ್ ವಯರ್ ಹಾಗೂ ಲೈಟ್ ದುರಸ್ತಿ ಮಾಡಲು ತಿಳಿಸಿದ್ದಾರೆಂದು ಹೇಳಿದನು. ಸತ್ಯವೆಂದು ನಂಬಿದ ಸರೋಜಿನಿ ಆತನನ್ನು ಒಳಗೆ ಬಿಟ್ಟಿದ್ದರು. ಆತ ದುರಸ್ತಿಯ ನಾಟಕ ಮಾಡಿ ಮಲಗುವ ಕೋಣೆಯ ಮಂಚದ ಕೆಳಭಾಗದಲ್ಲಿ ಬ್ಯಾಗ್‌ನಲ್ಲಿದ್ದ ಚಿನ್ನ ಹಾಗೂ ನಗದನ್ನು ಕಳವು ಮಾಡಿ ಬಳಿಕ ಪರಾರಿಯಾಗಿದ್ದಾನೆ. ಕಳ್ಳ 42 ಸಾವಿರ ರೂ. ಮೌಲ್ಯದ 7 ಗ್ರಾಂ ಚಿನ್ನಾಭರಣ ಹಾಗೂ 6 ಸಾವಿರ ರೂ. ನಗದನ್ನು ಕಳವು ಮಾಡಿ ಬಳಿಕ ಪರಾರಿಯಾಗಿದ್ದಾನೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


