Saturday, June 6, 2026
Homeಚಿಕ್ಕಮಗಳೂರುಏಕಾಏಕಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

ಏಕಾಏಕಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

- Advertisement -
- Advertisement -

ಚಿಕ್ಕಮಗಳೂರಿನ ಅಜ್ಜಂಪುರ ತಾಲ್ಲೂಕಿನ ಸೊಕ್ಕೆ ಗ್ರಾಮದ ವಸತಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದ ವಿದ್ಯಾರ್ಥಿನಿಯೋರ್ವಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. 

ಮೃತ ವಿದ್ಯಾರ್ಥಿನಿ ಉಷಾ (13). ಈಕೆ ಶನಿವಾರ ಬೆಳಗ್ಗೆ ವಸತಿ ಶಾಲೆಯಲ್ಲಿ ತಲೆ ಸುತ್ತಿ ಬಿದ್ದಿದ್ದು, ಕೂಡಲೇ ವಸತಿ ಶಾಲೆಯ ಪ್ರಾಂಶುಪಾಲರು 108 ಆಂಬುಲೆನ್ಸ್ ಮೂಲಕ ಅಜ್ಜಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ವಿದ್ಯಾರ್ಥಿ ಮೃತಪಟ್ಟಿದ್ದಾರೆ.

ವಿದ್ಯಾರ್ಥಿನಿಯು ಟಿ.ಬಿ. ಖಾಯಿಲೆಯಿಂದ ಬಳಲುತ್ತಿದ್ದಳೆಂದು ವಸತಿ ಶಾಲೆಯ ಪ್ರಾಂಶುಪಾಲ ಶಿವರಾಜ್  ಸ್ಪಷ್ಟಪಡಿಸಿದ್ದು, ಹಲವು ಬಾರಿ ಆಕೆಯ ಪೊಷಕರಿಗೆ ತಿಳಿಸಿ ಮನೆಗೆ ಕರೆದುಕೊಂಡು ಹೋಗಿ ಅಲ್ಲಿಯೇ ವ್ಯಾಸಂಗ ಮಾಡುವಂತೆ ಹೇಳಿದರು. ಆದರೆ, ಪೋಷಕರು ಇದೊಂದು ವರ್ಷ ವ್ಯಾಸಂಗ ಮಾಡಲಿ, ಮುಂದಿನ ವರ್ಷ ಬದಲಾಯಿಸುವುದಾಗಿ ಹೇಳಿ ವಸತಿ ಶಾಲೆಯಲ್ಲಿ ಬಿಟ್ಟಿದ್ದರು ಎನ್ನಲಾಗಿದೆ.

ಆದರೆ ಇತ್ತೀಚೆಗೆ ಉಷಾ ತುಂಬಾ ಡಿಪ್ರೆಷನ್‌ಗೆ ಒಳಗಾಗಿದ್ದು, ಪೋಷಕರು ಚಿಕಿತ್ಸೆ ಕೊಡಿಸಿದ್ದರು. ಆಕೆ ಪ್ರತಿ ದಿನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು. ಇಂದು ಏಕಾಏಕಿ ಕುಸಿದ್ದು ಬಿದ್ದಳು. ಪ್ರಥಮ ಚಿಕಿತ್ಸೆಗೆಂದು ಅಜ್ಜಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ದುರಾದೃಷ್ಟವಶಾತ್ ಆಸ್ಪತ್ರೆಗೆ ಬರುವಷ್ಟರಲ್ಲಿ ಬಾಲಕಿ ತೀರಿಕೊಂಡಿದ್ದಳು.

- Advertisement -

Latest News

error: Content is protected !!