ಹಾವೊಂದು ಎಕ್ಸ್‌ಪ್ರೆಸ್ ರೈಲಿನ ಎ.ಸಿ ಕೋಚ್‌ನಲ್ಲಿ ಪ್ರತ್ಯಕ್ಷವಾಗಿ ಬುಸುಗುಟ್ಟಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ್ ನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ವಿಡಿಯೊ ಹರಿದಾಡಿದೆ.
ಮಧ್ಯಪ್ರದೇಶದ ಜಬಲ್ಪುರ್– ಮುಂಬೈ ನಡುವೆ ಸಂಚರಿಸುವ ಗರೀಬ್ ರಥ್ ಎಕ್ಸ್‌ಪ್ರೆಸ್ ರೈಲಿನ ಎ.ಸಿ ಕೋಚ್‌ನಲ್ಲಿ ಮಹಾರಾಷ್ಟ್ರದ ಕಾಸರಾ ನಿಲ್ದಾಣದ ಬಳಿ ಇತ್ತೀಚೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ವಿಡಿಯೋ ಲಿಂಕ್: https://x.com/LokmatTimes_ngp/status/
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಬೋಗಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಹಾವು ಜನರ ಗದ್ದಲಕ್ಕೆ ಹೊರಗೆ ಬಂದು ಕಬ್ಬಿಣದ ಸರಳಿಗೆ ಸುತ್ತಿಕೊಂಡು ಬುಸುಗುಟ್ಟಿದ್ದು, ಇದರಿಂದ ಕೆಲಹೊತ್ತು ಪ‍್ರಯಾಣಿಕರು ಆತಂಕಗೊಂಡಿದ್ದರು. ಬಳಿಕ ಪ್ರಯಾಣಿಕರನ್ನು ಬೋಗಿಯಿಂದ ಇಳಿಸಿ ಹಾವು ಹಿಡಿಯುವರನ್ನು ಕರೆಯಿಸಿ ಹಾವನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
ಈ ವೇಳೆಯಲ್ಲಿ ಯಾವುದೇ ಪ್ರಯಾಣಿಕರಿಗೂ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ.