Saturday, June 6, 2026
Homeತಾಜಾ ಸುದ್ದಿವಿಟ್ಲ: ಬಸ್, ಲಾರಿ ಹಾಗೂ ಕಾರು ನಡುವೆ ಸರಣಿ ಅಪಘಾತ

ವಿಟ್ಲ: ಬಸ್, ಲಾರಿ ಹಾಗೂ ಕಾರು ನಡುವೆ ಸರಣಿ ಅಪಘಾತ

- Advertisement -
- Advertisement -

ವಿಟ್ಲ: ಬಸ್ ಲಾರಿ ಹಾಗೂ ಕಾರು ನಡುವೆ ಸರಣಿ ಅಪಘಾತ ಇಂದು ಬೆಳಗ್ಗೆ ಮಂಗಳೂರು ರಾಷ್ಟೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ನಡೆದಿದೆ.

ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಮುಂಭಾಗದಲ್ಲಿ ತೆರಳುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರಿಗೂ ಡಿಕ್ಕಿ ಹೊಡೆದು ರಸ್ತೆ ಮಧ್ಯದಲ್ಲಿ ಹೋಗಿ ನಿಂತಿದೆ. ಘಟನೆಯಲ್ಲಿ ಬಸ್ಸಿಗೆ ಮತ್ತು ಲಾರಿಗೆ ಹಾನಿಯಾಗಿದೆ.

ಈ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಘಟನೆಯಿಂದ ಹೆದ್ದಾರಿ ಸಂಪೂರ್ಣವಾಗಿ ಬ್ಲಾಕ್ ಆಗಿದೆ. ಹೆದ್ದಾರಿಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿತ್ತು. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!