Saturday, May 25, 2024
Homeಕರಾವಳಿಮಂಗಳೂರು: ಮರೋಳಿಯಲ್ಲಿ ಚಿರತೆ ಪ್ರತ್ಯಕ್ಷ ವದಂತಿ; ಸ್ಥಳೀಯರಲ್ಲಿ ಆತಂಕ!

ಮಂಗಳೂರು: ಮರೋಳಿಯಲ್ಲಿ ಚಿರತೆ ಪ್ರತ್ಯಕ್ಷ ವದಂತಿ; ಸ್ಥಳೀಯರಲ್ಲಿ ಆತಂಕ!

spot_img
- Advertisement -
- Advertisement -

ಮಂಗಳೂರು: ಭಾನುವಾರ ಸಂಜೆ ಮಂಗಳೂರಿನ ಮರೋಳಿಯಲ್ಲಿ ಚಿರತೆಯೊಂದು ಕಂಡು ಬಂದಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮರೋಳಿಯಲ್ಲಿ ಸಂಜೆ ವೇಳೆ ಮಕ್ಕಳು ಆಟವಾಡುತ್ತಿದ್ದ ಸಮಯದಲ್ಲಿ ಚಿರತೆಯನ್ನು ಹೋಲುವ ಪ್ರಾಣಿಯೊಂದನ್ನು ದೂರದಿಂದ ನೋಡಿದ್ದಾರೆ. ಆ ವೇಳೆ ಕತ್ತಲಾಗುತ್ತ ಬಂದಿದ್ದರಿಂದ ಅದು ಚಿರತೆಯೋ ಹೌದೋ? ಅಲ್ಲವೋ? ಎಂಬ ಗೊಂದಲವಿದೆ.

ಮೊಬೈಲ್ ಫೋನಿನಲ್ಲಿ ಜನರು ಫೋಟೋ ತೆಗೆದಿದ್ದು, ಫೋಟೋದಲ್ಲಿ ಸ್ಪಷ್ಟತೆ ಇಲ್ಲ. ಈ ಪ್ರದೇಶದಲ್ಲಿ ಈ ಹಿಂದೆ ಕೆಲವು ಬೀದಿ ನಾಯಿಗಳು ಇದ್ದು ಅವು ಇತ್ತೀಚೆಗೆ ಕಾಣಿಸುತ್ತಿಲ್ಲ. ಹೀಗಾಗಿ ನಾಯಿಗಳ ಬೇಟೆಗಾಗಿಯೇ ಬಂದಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.

ಸೋಮವಾರ ಬೆಳಗ್ಗೆ ಪುನಃ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತಿದ್ದಾರೆ. “ಅದು ಚಿರತೆಯೇ ಇರಬಹುದು ಅಥವಾ ಪಚನಾಡಿ ಪ್ರದೇಶದ ಸುತ್ತಲೂ ಅನೇಕ ಹೈನಾಗಳು ಇರುವುದರಿಂದ ಅದು ಹೈನಾ ಆಗಿರುವ ಸಂಭವನೀಯತೆ ಹೆಚ್ಚು. ಹೈನಾ ಪಚ್ಚನಾಡಿಯಿಂದ ಮರೋಲಿಗೆ ದಾರಿ ತಪ್ಪಿರುವ ಸಾಧ್ಯತೆಗಳಿವೆ” ಎಂದು ಮಂಗಳೂರು ವಲಯ ಅರಣ್ಯ ಅಧಿಕಾರಿ ಪ್ರಶಾಂತ್ ಪೈ ಅವರು ಅಭಿಪ್ರಾಯಪಟ್ಟಿದ್ದಾರೆ.

- Advertisement -
spot_img

Latest News

error: Content is protected !!