Monday, May 20, 2024
Homeತಾಜಾ ಸುದ್ದಿಸಂತೋಷ್ ಪಾಟೀಲರ ಸಾವಿಗೆ ನ್ಯಾಯ ಸಿಗುವವರೆಗೆ ಶವವನ್ನು ಕೊಂಡೊಯ್ಯುವುದಿಲ್ಲ: ಸಂತೋಷ್‌ ಸಂಬಂಧಿಕರು

ಸಂತೋಷ್ ಪಾಟೀಲರ ಸಾವಿಗೆ ನ್ಯಾಯ ಸಿಗುವವರೆಗೆ ಶವವನ್ನು ಕೊಂಡೊಯ್ಯುವುದಿಲ್ಲ: ಸಂತೋಷ್‌ ಸಂಬಂಧಿಕರು

spot_img
- Advertisement -
- Advertisement -

ಉಡುಪಿ: ಸಂತೋಷ್‌ ಪಾಟೀಲ್ ಅವರ ಸಾವಿಗೆ ಕಾರಣರಾದ ಸಚಿವ ಈಶ್ವರಪ್ಪ ಹಾಗೂ ಅವರ ಆಪ್ತರಾದ ರಮೇಶ್, ಬಸವರಾಜ್ ಬಂಧನವಾಗುವವರೆಗೂ ಶವ ಪರೀಕ್ಷೆಗೆ ಅನುಮತಿ ನೀಡುವುದಿಲ್ಲ ಎಂದು ಮೃತರ ಸಹೋದರ ಸಂಬಂಧಿ ಸುರೇಶ್ ಪಾಟೀಲ್ ಸ್ಪಷ್ಟಪಡಿಸಿದರು.

ಸಹೋದರ ಸಂತೋಷ್ ಪಾಟೀಲರ ಸಾವಿಗೆ ನ್ಯಾಯ ಸಿಗಬೇಕಾದರೆ ಡೆತ್‌ ನೋಟ್‌ನಲ್ಲಿರುವವರ ಬಂಧನವಾಗಬೇಕು. ಇಲ್ಲವಾದರೆ ಶವವನ್ನು ಕೊಂಡೊಯ್ಯುವುದಿಲ್ಲ ಎಂದು ಪಟ್ಟು ಹಿಡಿದರು.

ಸಹೋದರ ಸಂತೋಷ್ ಪಾಟೀಲ ಬಿಲ್ ಬಿಡುಗಡೆಗೆ 60 ರಿಂದ 70 ಸಲ ಈಶ್ವರಪ್ಪ ಮನೆಗೆ ಅಲೆದಿದ್ದರು. ಸಚಿವರ ಆಪ್ತರು 40 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ ಇಟ್ಟ ಕಾರಣದಿಂದ ಮನನೊಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು ಎಂದು ಗೋಳಾಡಿದರು.

ಸಂತೋಷ್ ಪಾಟೀಲರ ಸಹೋದರ ಹಾಗೂ ಸಂಬಂಧಿಗಳು ಮಂಗಳವಾರ ರಾತ್ರಿ 11ಕ್ಕೆ ಶಾಂಭವಿ ಲಾಡ್ಜ್‌ಗೆ ಬಂದು ಶವ ವೀಕ್ಷಣೆ ಮಾಡಿದರು. ಶವ ವೀಕ್ಷಿಸುವವರೆಗೂ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡುವುದಿಲ್ಲ ಎಂದು ಪತ್ನಿ ಜಯಶ್ರೀ ಪಟ್ಟುಹಿಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೃತರ ಸಹೋದರ ಹಾಗೂ ಸಂಬಂಧಿಗಳು ಉಡುಪಿಗೆ ಬಂದಿದ್ದಾರೆ.

ಉಡುಪಿಯ ಶಾಂಭವಿ ಲಾಡ್ಜ್‌ಗೆ ಮಂಗಳೂರಿನಿಂದ ಫೊರೆನ್ಸಿಕ್ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದೆ.

- Advertisement -
spot_img

Latest News

error: Content is protected !!