Sunday, May 19, 2024
HomeಅಪರಾಧSSLC ಪರೀಕ್ಷಾರ್ಥಿ ಮೇಲೆ ಅತ್ಯಾಚಾರಕ್ಕೆ ಯತ್ನ: ಸ್ಥಳೀಯರಿಂದ ಅಪ್ರಾಪ್ತ ಬಾಲಕಿಯ ರಕ್ಷಣೆ: ಪ್ರಿಯಕರ ಸೇರಿ ನಾಲ್ವರು...

SSLC ಪರೀಕ್ಷಾರ್ಥಿ ಮೇಲೆ ಅತ್ಯಾಚಾರಕ್ಕೆ ಯತ್ನ: ಸ್ಥಳೀಯರಿಂದ ಅಪ್ರಾಪ್ತ ಬಾಲಕಿಯ ರಕ್ಷಣೆ: ಪ್ರಿಯಕರ ಸೇರಿ ನಾಲ್ವರು ಪೊಲೀಸರ ವಶ

spot_img
- Advertisement -
- Advertisement -

ಚಿಕ್ಕಬಳ್ಳಾಪುರ  – ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿ ಮೇಲೆ ಮೂವರು ಕಾಮುಕರು ಅತ್ಯಾಚಾರ ನಡೆಸಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣ ಹೊರವಲಯದ ಪಾತಬಾಗೇಪಲ್ಲಿ ಬಳಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ಸೋಮವಾರ ಎಸ್ಎಸ್‌ ಎಲ್‌ ಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿನಿ ತನ್ನ ಪ್ರಿಯಕರನ ಜೊತೆ ಪಾತಬಾಗೇಪಲ್ಲಿ ಬಳಿಯ ನಿರ್ಜನ ಪ್ರದೇಶದ ಬೆಟ್ಟಗುಡ್ಡಗಳತ್ತ ತೆರಳಿದ್ದಳು. ಇನ್ನೂ ಪ್ರಿಯಕರ ನಾರಾಯಣಸ್ವಾಮಿ ತನ್ನ ಸ್ನೇಹಿತ ಮಂಜು ಜೊತೆ ಬೈಕ್ನಗಲ್ಲಿ ಡ್ರಾಪ್ ಪಡೆದುಕೊಂಡಿದ್ದ. ಇತ್ತ ಬಾಲಕಿ ಹಾಗೂ ಪ್ರಿಯಕರ ನಿರ್ಜನ ಪ್ರದೇಶದಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಪ್ರಿಯಕರನ ಸ್ನೇಹಿತ ಮಂಜು ಹಾಗೂ ಅಲ್ಲಿಯೇ ಮದ್ಯಪಾನದಲ್ಲಿ ತೊಡಗಿದ್ದ ನಾಗರಾಜು, ಸುರೇಶ್ ಸೇರಿ ಪ್ರೇಮಿಗಳ ಸರಸ ಸಲ್ಲಾಪದ ವೀಡಿಯೋ ರೆಕಾರ್ಡ್ ಮಾಡಿಕೊಂಡು ತಮಗೂ ಸಹಕರಿಸುವಂತೆ ಒತ್ತಡ ಹೇರಿ ಬ್ಲಾಕ್ ಮೇಲ್ ಮಾಡಿದ್ದಾರೆ. ಈ ವೇಳೆ ನಾರಾಯಣಸ್ವಾಮಿ ಅಲ್ಲಿಂದ ಓಡಿ ಬಂದು ಸ್ಥಳೀಯರಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಸ್ಥಳೀಯರು ಬೆಟ್ಟದ ಕಡೆಗೆ ಹೋಗಿ ಬಾಲಕಿಯನ್ನು ರಕ್ಷಣೆ ಮಾಡಿ ಮೂವರು ಯುವಕರನ್ನು ಹಿಡಿದಿದ್ದಾರೆ. ನಂತರ ಬಾಲಕಿ ಹಾಗೂ , ನಾರಾಯಣಸ್ವಾಮಿ ಸೇರಿದಂತೆ ಮೂವರು ಯುವಕರನ್ನು ಬಾಗೇಪಲ್ಲಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಿಯಕರನ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಬಾಲಕಿಯನ್ನು ತಮಗೂ ಸಹಕರಿಸುವಂತೆ ಆರೊಪಿಗಳು ಒತ್ತಡ ಹೇರುತ್ತಾರೆ.. ಈ ವೇಳೆ ಜೊತೆಯಲಿದ್ದ ಪ್ರಿಯಕರ ನಿರ್ಜನ ಪ್ರದೇಶದಿಂದ ಬಂದು ಸ್ಥಳೀಯರ ರಕ್ಷಣೆ ಕೋರಿದ್ದಾನೆ., ಕೂಡಲೇ ಸ್ಥಳಕ್ಕೆ ಆಗಮಿಸಿದ ಜನರು ಯುವತಿಯನ್ನು ರಕ್ಷಿಸಿದ್ದು ಅಲ್ಲದೇ, ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದಳು ಹೀಗಾಗಿ ಬಾಲಕಿ ಸೋಮವಾರ ಬಾಗೇಪಲ್ಲಿಗೆ ಪರೀಕ್ಷೆ ಬರೆಯಲೆಂದೇ ಬಂದಿದ್ದಳು. ಪರೀಕ್ಷೆ ಬಳಿಕ ಪ್ರಿಯಕರ ನಾರಾಯಣಸ್ವಾಮಿ ಜೊತೆಗೆ ನಿರ್ಜನ ಪ್ರದೇಶಕ್ಕೆ ತೆರಳಿದ್ದಳು.. ಕಳೆದ 2 ವರ್ಷಗಳಿಂದ ನಾರಾಯಣಸ್ವಾಮಿ ಜೊತೆ ಪ್ರೀತಿಯಲ್ಲಿದ್ದಳು ಎನ್ನಲಾಗಿದೆ.. ಅಪ್ರಾಪ್ತ ಬಾಲಕಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು ಎನ್ನಲಾಗಿದೆ

ಪೊಲೀಸರು ಬಾಲಕಿಯನ್ನು ಬಾಲಮಂದಿರದಲ್ಲಿ ಆಶ್ರಯ ನೀಡಿ ತನಿಖೆ ಮುಂದುವರೆಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲಕಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಅಪ್ರಾಪ್ತೆ ಮೇಲಿನ ಅತ್ಯಾಚಾರ ಯತ್ನ ಆರೋಪದಡಿ ಪ್ರಿಯಕರ ಸೇರಿ ನಾಲ್ವರು ಆರೋಪಿಗಳನ್ನು ಚಿಕ್ಕಬಳ್ಳಾಪುರ ನಗರ ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಲಾಗಿದೆ. ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಆರೋಪಿಗಳಿಗೆ ಪೊಲೀಸರು ಮೆಡಿಕಲ್ ಮಾಡಿಸಿ ತನಿಖೆ ಮುಂದುವರೆಸಿದ್ದಾರೆ

- Advertisement -
spot_img

Latest News

error: Content is protected !!