- Advertisement -
![]()
- Advertisement -
ಕಾಸರಗೋಡು: ಮಂಜೇಶ್ವರ ಠಾಣಾ ವ್ಯಾಪ್ತಿಯ ದೇವಸ್ಥಾನದಲ್ಲಿ ದೇವರ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಅರ್ಚಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ತಿರುವನಂತಪುರ ಮೂಲದ ದೀಪಕ್ ನಂಬೂದರಿ ಬಂಧಿತ ಆರೋಪಿ. ಈತ ದೇವರ ಚಿನ್ನಾಭರಣ ಕದ್ದು ಅದನ್ನ ಮಾರಾಟ ಮಾಡಿ ದೇವರ ವಿಗ್ರಹಕ್ಕೆ ನಕಲಿ ಚಿನ್ನಾಭರಣವನ್ನು ಹಾಕಿದ್ದ ಎನ್ನಲಾಗಿದೆ. ಮೊಕ್ತೇಸರ ಎಂ . ದೀಪಕ್ ರಾವ್ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
- Advertisement -


