Sunday, May 19, 2024
Homeತಾಜಾ ಸುದ್ದಿಹದಿನೈದು ವರ್ಷಗಳ ನಂತರ ಪತ್ತೆಯಾದ ಪೊಲೀಸ್ ಅಧಿಕಾರಿ- ಸಹೋದ್ಯೋಗಿ ಗಳಿಗೆ ದೊರಕಲು 'ಜಾಕೆಟ್' ಮುಖ್ಯ ಕಾರಣ!..

ಹದಿನೈದು ವರ್ಷಗಳ ನಂತರ ಪತ್ತೆಯಾದ ಪೊಲೀಸ್ ಅಧಿಕಾರಿ- ಸಹೋದ್ಯೋಗಿ ಗಳಿಗೆ ದೊರಕಲು ‘ಜಾಕೆಟ್’ ಮುಖ್ಯ ಕಾರಣ!..

spot_img
- Advertisement -
- Advertisement -

ಗ್ವಾಲಿಯರ್: ಇಲ್ಲಿನ ಫುಟ್‌ಪಾತ್‌ನಲ್ಲಿ ಹದಿನೈದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಇಬ್ಬರು ಸಹೋದ್ಯೋಗಿಗಳು ಆಕಸ್ಮಿಕವಾಗಿ ಪತ್ತೆ ಮಾಡಿದ್ದಾರೆ.ಡಿವೈಎಸ್ಪಿಗಳಾದ ರತ್ನೇಶ್ ಸಿಂಗ್ ಥೋಮರ್ ಮತ್ತು ವಿಜಯ್ ಬಹದ್ದೂರ್ ಎಂಬುವವರು ಭಿಕ್ಷುಕನಂತಿದ್ದ ಒಬ್ಬ ವ್ಯಕ್ತಿ ಚಳಿಯಿಂದ ನಡುಗುತ್ತಿರುವಾಗ ಆತನಿಗೆ ತಮ್ಮ ಜಾಕೆಟ್ ತೆಗೆದು ಕೊಟ್ಟರು. ಅವೇಳೆ ಆ ವ್ಯಕ್ತಿ ಹೆಸರಿನಿಂದ ಕರೆದಾಗ ಅವರಿಗೆ ಅಚ್ಚರಿಯಾಯಿತು.

ನಂತರದಲ್ಲಿಆ ವ್ಯಕ್ತಿ ತಮ್ಮ ಮಾಜಿ ಸಹೋದ್ಯೋಗಿ ಮನೀಶ್ ಮಿಶ್ರಾ ಎಂದು ಗುರುತಿಸಿ ಅವರನ್ನು ಸ್ಥಳೀಯ ಸ್ವಯಂಸೇವಾ ಸಂಸ್ಥೆಯೊಂದು ನಡೆಸುವ ಆಶ್ರಮಕ್ಕೆ ಕರೆದೊಯ್ದು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು.ಮನೀಶ್ ಮಿಶ್ರಾ 2005ರಲ್ಲಿ ದಾಟಿಯಾದಲ್ಲಿ ಇನ್‌ಸ್ಪೆಕ್ಟರ್ ಆಗಿದ್ದರು ಮಿಶ್ರಾ ಒಳ್ಳೆಯ ಅಥ್ಲೀಟ್ ಮತ್ತು ಶಾರ್ಪ್‌ಶೂಟರ್ ಆಗಿದ್ದರು. 1999ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಕೆಲ ವರ್ಷಗಳ ಬಳಿಕ ಮಾನಸಿಕ ಸಮಸ್ಯೆ ಉಂಟಾಗಿ ಕುಟುಂಬದವರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಒಂದು ದಿನ ನಾಪತ್ತೆಯಾದವರು ಮತ್ತೆ ಸಿಕ್ಕಿರಲಿಲ್ಲ.

- Advertisement -
spot_img

Latest News

error: Content is protected !!