Thursday, June 4, 2026
Homeತಾಜಾ ಸುದ್ದಿಕಡಬ: ರೈಲ್ವೇ ಟ್ರ್ಯಾಕ್ ನಲ್ಲಿ ಛಿದ್ರ ಛಿದ್ರವಾಗಿ ಯುವಕನ ಮೃತದೇಹ ಪತ್ತೆ

ಕಡಬ: ರೈಲ್ವೇ ಟ್ರ್ಯಾಕ್ ನಲ್ಲಿ ಛಿದ್ರ ಛಿದ್ರವಾಗಿ ಯುವಕನ ಮೃತದೇಹ ಪತ್ತೆ

- Advertisement -
- Advertisement -

ಕಡಬ: ಇಲ್ಲಿನ ಕಾಣಿಯೂರು ಬಳಿಯ ರೈಲ್ವೇ ಟ್ರ್ಯಾಕ್ ನಲ್ಲಿ ಯುವಕನ ಮೃತದೇಹವೊಂದು ರಕ್ತಸಿಕ್ತ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಕಾಣಿಯೂರು ಸಮೀಪದ ಅಭೀರ ನಿವಾಸಿ ದಿ.ರಾಮಯ್ಯ ಪೂಜಾರಿ ಅಭೀರರವರ ಪುತ್ರ ದಿವಾಕರ ಪೂಜಾರಿ ಎಂದು ತಿಳಿದು ಬಂದಿದೆ.

ಮೃತ ದೇಹವು ಬೆಳಂದೂರು ಗ್ರಾಮದ ಅಗರಿ ಎಂಬಲ್ಲಿ ರೈಲ್ವೆ ಹಳಿಯ ಮೇಲೆ ಬಿದ್ದಿತ್ತು. ದೇಹದ ಮೇಲೆ ರೈಲು ಹರಿದ ಗುರುತುಗಳಿದ್ದು, ದೇಹವು ಛಿದ್ರ ಛಿದ್ರವಾಗಿ ಚೆಲ್ಲಿಕೊಂಡಿತ್ತು.

ನಿನ್ನೆ ಸಂಜೆಯಿಂದ ಅವರು ಮನೆಯಿಂದ ನಾಪಾತ್ತೆಯಾಗಿದ್ದು, ಮನೆಯವರು ಹಾಗೂ ಕುಟುಂಬ ಸದಸ್ಯರು ರಾತ್ರಿಯಿಂದಲೇ ಅವರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.

ಇಂದು ಬೆಳಿಗ್ಗೆ ಅವರ ಮೃತ ದೇಹ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ. ದಿವಾಕರವರು ಆತ್ಮಹತ್ಯೆ
ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಇವರ ಸಾವಿಗೆ ಕಾರಣ ಏನು ಎಂದು ಪೊಲೀಸ್
ತನಿಖೆಯಿಂದ ಹೊರ ಬರಬೇಕಿದೆ. ಮೃತರು ಪತ್ನಿ ಹಾಗೂ 8 ವರ್ಷದ ಪುತ್ರಿಯನ್ನು ಆಗಲಿದ್ದಾರೆ

- Advertisement -

Latest News

error: Content is protected !!