Saturday, June 27, 2026
Homeಕರಾವಳಿಉಪ್ಪಿನಂಗಡಿ: ಮೇಯಲು ಬಿಟ್ಟ ದನವನ್ನು ಕರೆ ತರುವಾಗ ಮಹಿಳೆಯ ಮಾನಭಂಗಕ್ಕೆ ಯತ್ನ: ಮಾಂಗಲ್ಯ ಸರ ಕಿತ್ತು...

ಉಪ್ಪಿನಂಗಡಿ: ಮೇಯಲು ಬಿಟ್ಟ ದನವನ್ನು ಕರೆ ತರುವಾಗ ಮಹಿಳೆಯ ಮಾನಭಂಗಕ್ಕೆ ಯತ್ನ: ಮಾಂಗಲ್ಯ ಸರ ಕಿತ್ತು ಹಲ್ಲೆ ನಡೆಸಿದ ದುಷ್ಕರ್ಮಿಗಳು

- Advertisement -
- Advertisement -

ಉಪ್ಪಿನಂಗಡಿ: ಮೇಯಲು ಬಿಟ್ಟಿದ್ದ ದನವನ್ನು ಸಂಜೆ ವೇಳೆಗೆ ಮನೆಗೆ ಕರೆ ತರುತ್ತಿದ್ದ ವೇಳೆ ಮಹಿಳೆಯ ಮಾನಭಂಗಕ್ಕೆ ಯತ್ನಿಸಿ, ಮಾಂಗಲ್ಯ ಸರ ಕಿತ್ತು ಹಾಕಿ ಹಲ್ಲೆ ನಡೆಸಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಮೇಯಲು ಬಿಟ್ಟಿದ್ದ ದನವನ್ನು  ಕರೆದುಕೊಂಡು ಹೋಗುತ್ತಿದ್ದ  ಬೊಲೆರೋ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡ ಮಹಿಳೆಯನ್ನು ಅಡ್ಡಗಟ್ಟಿದೆ. ಬಳಿಕ ಹಲ್ಲೆ ನಡೆಸಿ, ಮಹಿಳೆಯ ಕತ್ತಿಗೆ ಕೈ ಹಾಕಿ ಮಾನಭಂಗ ಯತ್ನಿಸಿದೆ ಎನ್ನಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಇನ್ನು ಹಲ್ಲೆ ನಡೆಸಿ 24 ಗಂಟೆ ಕಳೆದರೂ ಪೊಲೀಸರು ಪ್ರಕರಣ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ  .  ಸದ್ಯ ಮಹಿಳೆ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!