Monday, May 6, 2024
Homeಕರಾವಳಿಮಂಗಳೂರು ಮಹಾನಗರಪಾಲಿಕೆಯ ಈಜುಕೊಳದಲ್ಲಿ ಮುಳುಗಿ ವ್ಯಕ್ತಿ ಮೃತ್ಯು

ಮಂಗಳೂರು ಮಹಾನಗರಪಾಲಿಕೆಯ ಈಜುಕೊಳದಲ್ಲಿ ಮುಳುಗಿ ವ್ಯಕ್ತಿ ಮೃತ್ಯು

spot_img
- Advertisement -
- Advertisement -

ಮಂಗಳೂರು: ವ್ಯಕ್ತಿಯೊಬ್ಬರು ಮಂಗಳವಾರದಂದು ನಗರದ ಲೇಡಿಹಿಲ್ ಬಳಿಯ ಮಂಗಳೂರು ಮಹಾನಗರಪಾಲಿಕೆಯ ಈಜುಕೊಳದಲ್ಲಿಈಜುವಾಗ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ವ್ಯಕ್ತಿ ಬಿಹಾರ ಮೂಲದ ಅಭಿಷೇಕ್ (35) ಎಂದು ಗುರುತಿಸಲಾಗಿದೆ. ಈತ ಮಂಗಳವಾರದಂದು ಸಂಜೆ 4ರ ವೇಳೆಗೆ ಈಜುಕೊಳದಲ್ಲಿ ಈಜಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇನ್ನು ಅಭಿಷೇಕ್ ಅವರು ಪಾಲಿಕೆ ನಿರ್ವಹಿಸುತ್ತಿರುವ 15 ಅಡಿ ಆಳದ ಈಜುಕೊಳದಲ್ಲಿ ಸಿಲುಕಿಕೊಂಡಿದ್ದರು. ಅಭಿಷೇಕರನ್ನು ಈಜುಕೊಳದ ಜೀವರಕ್ಷಕರಾದ ರಾಜೇಂದ್ರ ಮತ್ತು ಪುಂಡಲಿಕ್ ಅವರು ಕೂಡಲೇ ಮೇಲಕ್ಕೆ ತಂದಿದ್ದರೂ. ಸ್ಥಳದಲ್ಲಿದ್ದ ಪ್ರೊ, ನರೇಂದ್ರ ನಾಯಕ್ ಮತ್ತು ಇತರರು ಸಿಪಿಆರ್ ಮಾಡಿ ಉಸಿರಾಡುವಂತೆ ಮಾಡಿದ್ದಾರೆ. ಆದರೆ ಈ ಪ್ರಯತ್ನವು ವಿಫಲವಾಗಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಬರ್ಕೆ ಪೊಲೀಸರು ಶವವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದು, ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

- Advertisement -
spot_img

Latest News

error: Content is protected !!