Tuesday, May 14, 2024
Homeಅಪರಾಧಹೆಬ್ರಿ : ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸುತ್ತಿದ್ದ ವಿಕೃತಕಾಮಿಯ ಬಂಧನ!

ಹೆಬ್ರಿ : ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸುತ್ತಿದ್ದ ವಿಕೃತಕಾಮಿಯ ಬಂಧನ!

spot_img
- Advertisement -
- Advertisement -

ಹೆಬ್ರಿ : ಖಾಸಗಿ ಬಸ್ ನ ನಿರ್ವಾಹಕನೋರ್ವ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರತಿನಿತ್ಯ ಗುಪ್ತಾಂಗ ತೋರಿಸಿ ವಿಕೃತಿ ಮೆರೆಯುತ್ತಿದ್ದ ಘಟನೆ ಇಲ್ಲಿನ ಸಂತೆಕಟ್ಟೆಯ ನರ್ಸಿಂಗ್ ಕಾಲೇಜ್ ಬಳಿ ನಡೆದಿದೆ.

ಹೆಬ್ರಿಯ ಹೆಸರಾಂತ ಖಾಸಗಿ ಬಸ್ ನ ಕಂಡಕ್ಟರ್ ಉಪೇಂದ್ರ ಎನ್ನುವಾತ ಈ ಕೃತ್ಯ ಎಸಗಿದ್ದಾನೆ. ಸಂತೆಕಟ್ಟೆ ನರ್ಸಿಂಗ್ ಕಾಲೇಜ್ ಬಳಿ ತನ್ನ ಸ್ಕೂಟಿಯಲ್ಲಿ ಬಂದು ಅಲ್ಲಿನ ವಿದ್ಯಾರ್ಥಿನಿಯರಿಗೆ ಪ್ಯಾಂಟ್ ಜಿಪ್ ಜಾರಿಸಿ ಕಳೆದ ಕೆಲವು ದಿನಗಳಿಂದ ಗುಪ್ತಾಂಗ ತೋರಿಸುತ್ತಿದ್ದ, ಮಾತ್ರವಲ್ಲದೆ ಕೈಸನ್ನೆ ಕಣ್ಣ ಸನ್ನೆ ಮಾಡುತ್ತ ಯುವತಿಯರ ಜೊತೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಎಂದು ದೂರಲಾಗಿತ್ತು.

ನಿನ್ನೆ ಕಾಲೇಜಿನ ಮುಖ್ಯಸ್ಥರು, ವಿದ್ಯಾರ್ಥಿನಿಯರು ಇರುವಾಗಲೇ ತನ್ನ ವರ್ತನೆ ತೋರಿಸುತ್ತಿದ್ದಂತೆ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿನಿಗಳು ಬಸ್ ಕಂಡಕ್ಟರ್ ನ ಅಟ್ಟಾಡಿಸಿದ್ದಾರೆ. ಅಲ್ಲಿಂದ ಕಾಲ್ಕಿತ್ತ ಉಪೇಂದ್ರನ ಗ್ರಾಹಚರ ಅಲ್ಲೂ ಕೆಟ್ಟಿತ್ತು. ಕಾಲೇಜಿನಿಂದ ತಿಂಕನಿಡಿಯೂರ್ ಕಡೆ ಓಡುತ್ತಿದ್ದ ಈತನ ನಡತೆ ಕಂಡು ಸ್ಥಳೀಯ ದಸಂಸ ಮುಖಂಡರ ಕೈಗೆ ಸಿಕ್ಕಿಬಿದ್ದಿದ್ದಾನೆ, ಅಲ್ಲಿ ಆತನನ್ನು ಹಿಡಿದು ಬಾಯಿ ಬಿಡಿಸಿದಾಗ ಘಟನೆ ವಿವರಿಸಿದ್ದಾನೆ. ಅಲ್ಲಿಂದ ಆತನನ್ನು ನೇರ ಕಾಲೇಜಿಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿನಿಯರಿಗೆ ಕಂಡಕ್ಟರ್ ನನ್ನು ದಸಂಸ ಮುಖಂಡರು ಒಪ್ಪಿಸಿದ್ದಾರೆ.

ನರ್ಸಿಂಗ್ ಕಾಲೇಜ್ ನ ವಿದ್ಯಾರ್ಥಿನಿಯರು, ದಿನ ನಿತ್ಯ ತಿರಿಕುಳ ನೀಡುತ್ತಿದ್ದವನು ಈತನೇ ಎಂದು ತಿಳಿದು ಮತ್ತೆ ಉಪೇಂದ್ರನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದು, ಬಳಿಕ ಉಡುಪಿ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿ, ಈಗ ಕಾಮುಕ ಬಸ್ ಕಂಡಕ್ಟರ್ ಪೊಲೀಸರ ವಶದಲ್ಲಿದಾನೆ .

- Advertisement -
spot_img

Latest News

error: Content is protected !!