Thursday, June 4, 2026
Homeಕರಾವಳಿಉಡುಪಿಕೊಲ್ಲೂರು: ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಕೊಲ್ಲೂರು: ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

- Advertisement -
- Advertisement -

ಕೊಲ್ಲೂರು: ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಚಿತ್ತೂರು ಗ್ರಾಮದ ಗ್ಯಾಸಕೇರಿ ಎಂಬಲ್ಲಿ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯದಲ್ಲಿ ಪತ್ತೆಯಾಗಿದೆ.

ಸಂಜೀವ ದೇವಾಡಿಗ (48) ಮೃತಪಟ್ಟ ವ್ಯಕ್ತಿ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಸಂಜೀವ ದೇವಾಡಿಗ ಆ.3 ರಂದು ಬೆಳಿಗ್ಗೆ ಮನೆಯಿಂದ ಹೋಗಿದ್ದು, ಬಳಿಕ ಮನೆಗೆ ವಾಪಸ್ಸು ಬಂದಿರಲಿಲ್ಲ. ಎಷ್ಟೇ ಹುಡುಕಾಡಿದ್ರೂ ಪತ್ತೆಯಾಗಿರಲಿಲ್ಲ.

ನಿನ್ನೆ ಸಂಜೆ ಸ್ಥಳೀಯ ಮಹಿಳೆಯರು ಅರಣ್ಯ ಪ್ರದೇಶಕ್ಕೆ ಕಟ್ಟಿಗೆ ತರಲು ಹೋಗಿದ್ದ ವೇಳೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!