Friday, June 27, 2025
Homeಆರಾಧನಾಮೂಡಿಗೆರೆಯಲ್ಲಿ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವ್ಯಕ್ತಿ ತೀವ್ರ ಅಸ್ವಸ್ಥ

ಮೂಡಿಗೆರೆಯಲ್ಲಿ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವ್ಯಕ್ತಿ ತೀವ್ರ ಅಸ್ವಸ್ಥ

spot_img
- Advertisement -
- Advertisement -

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಮೂಲದ ಕುಮಾರ್ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥನಾಗಿ ರಸ್ತೆ ಮಧ್ಯೆ ಬಿದ್ದ ಘಟನೆ ನಡೆದಿದೆ.

ಕುಮಾರ್ ಅವರು ಯಾತ್ರೆಯ ವೇಳೆ ತೀವ್ರ ರಕ್ತವಾಂತಿಯನ್ನು ಮಾಡಿದ್ದು, ಈ ನಡುವೆ ಅವೆ ಸುಸ್ತಾಗಿ ಪ್ರಜ್ಞೆ ತಪ್ಪಿದ್ದಾರೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಹಾಗೂ ಸಮಾಜಸೇವಕ ಆರೀಫ್ ಮತ್ತು ಇತರೆ ಸ್ಥಳೀಯರು ತಕ್ಷಣವೇ ತಮ್ಮ ಪ್ರಯತ್ನಗಳಿಂದ ಕುಮಾರ್ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಿದರು. ಘಟನೆಯಲ್ಲಿ ಮಾನವೀಯತೆಯನ್ನು ಮೆರೆದ ಸ್ಥಳೀಯರು ಹಾಗೂ ಆರೀಫ್ ಅವರ ಸಹಾಯ ಕಾರ್ಯವನ್ನು ವ್ಯಾಪಕವಾಗಿ ಶ್ಲಾಘಿಸಲಾಗಿದೆ.

- Advertisement -
spot_img

Latest News

error: Content is protected !!