Saturday, May 18, 2024
Homeತಾಜಾ ಸುದ್ದಿಬರೋಬ್ಬರಿ 20 ವರ್ಷಗಳ ಕಾಲ ಪಾಕಿಸ್ತಾನ ಜೈಲಿನಲ್ಲಿದ್ದ ವ್ಯಕ್ತಿ ಮರಳಿ ತಾಯ್ನಾಡಿಗೆ

ಬರೋಬ್ಬರಿ 20 ವರ್ಷಗಳ ಕಾಲ ಪಾಕಿಸ್ತಾನ ಜೈಲಿನಲ್ಲಿದ್ದ ವ್ಯಕ್ತಿ ಮರಳಿ ತಾಯ್ನಾಡಿಗೆ

spot_img
- Advertisement -
- Advertisement -

ರೂರ್ಕೆಲಾ: ಬರೋಬ್ಬರಿ 20 ವರ್ಷಗಳ ಕಾಲ ಪಾಕಿಸ್ತಾನ ಜೈಲಿನಲ್ಲಿದ್ದ ಕುಲು ಎಂಬ ವ್ಯಕ್ತಿ ಬಿಡುಗಡೆ ಪಡೆದು ಭಾರತಕ್ಕೆ ವಾಪಸಾಗಿದ್ದಾರೆ.ಐವತ್ತು ವರ್ಷದ ಬುಡಕಟ್ಟು ವ್ಯಕ್ತಿ ಬಿರ್ಜು ಕುಲು ಒಡಿಶಾಮೂಲದವರು.25ನೇ ವಯಸ್ಸಿನಲ್ಲಿ ಮನೆ ಬಿಟ್ಟು ಬಂದಿದ್ದ ಕುಲು ಪಂಜಾಬ್‌ಗೆ ತೆರಳುವಾಗ ಪಾಕಿಸ್ತಾನದ ಭೂಪ್ರದೇಶವನ್ನು ತಪ್ಪಾಗಿ ದಾಟಿದ್ದರಿಂದ ಪಾಕಿಸ್ತಾನದಲ್ಲಿ ಜೈಲು ಪಾಲಾಗಿದ್ದ.
ಲಾಹೋರ್ ಜೈಲಿನಿಂದ ಬಿಡುಗಡೆಯಾದ ನಂತರ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಬುಡಕಟ್ಟು ಪ್ರಾಬಲ್ಯದ ಸುಂದರ್‌ಗ ಜಿಲ್ಲೆಯ ಕುತ್ರಾ ಬ್ಲಾಕ್‌ನ ಕಟಂಗಾ ಗ್ರಾಮವನ್ನು ತಲುಪಿದ್ದಾರೆ.

ಆತನಿಗೆ ಸಾಂಪ್ರದಾಯಿಕ ಬುಡಕಟ್ಟು ನೃತ್ಯ, ಸಂಗೀತ ಮತ್ತು ಡ್ರಮ್ಸ್ ಮತ್ತು ಇತರ ವಾದ್ಯಗಳೊಂದಿಗೆ ಗ್ರಾಮಸ್ಥರು ಭವ್ಯವಾಗಿ ಸ್ವಾಗತಿಸಿದರು.ಕುಲು ಪೋಷಕರು ಮೃತಪಟ್ಟಿದ್ದು ಅವರ ತಂದೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ, ಸಹೋದರಿ ಮತ್ತು ಅವರ ಕುಟುಂಬದವರು ಅವರ ಆಗಮನಕ್ಕೆ ಹರ್ಷ ವ್ಯಕ್ತ ಪಡಿಸಿದ್ದಾರೆ.

- Advertisement -
spot_img

Latest News

error: Content is protected !!