Thursday, June 4, 2026
Homeಕರಾವಳಿಉಡುಪಿಉಡುಪಿ: 25 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಉಡುಪಿ: 25 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

- Advertisement -
- Advertisement -

ಉಡುಪಿ: ಕಳೆದ 25 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಬಾರ್ಕೂರಿನ ನಿವಾಸಿ ಬಾಬು ಮರಕಾಲ ಮೃತಪಟ್ಟಿರುವ ವ್ಯಕ್ತಿ.

ಬಾಬು ಮರಕಾಲ ಕಳೆದ ತಿಂಗಳೂ ಉಡುಪಿ ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ರು. ಆಗ ಇವರನ್ನು ಸಮಾಜಸೇವಕರಾದ ನಿತ್ಯಾನಂದ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಚಿಕಿತ್ಸೆ ಫಲಸಿದೇ ವೃದ್ಧ ಸಾವನ್ನಪ್ಪಿದ್ರು. ಅವ್ರ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ರಕ್ಷಿಸಿಡಲಾಗಿತ್ತು. ಇದೀಗ ಸಂಬಂಧಿಕರಿಗೆ ಬಾಬು ಮರಕಾಲ ಮೃತಪಟ್ಟಿರುವ ವಿಷಯ ತಿಳಿದುಬಂದಿದೆ. ಆ ಬಳಿಕ ಸಂಬಂಧಿಕರು ಆಸ್ಪತ್ರೆಯನ್ನು ಸಂಪರ್ಕಿಸಿ ಕಾನೂನು ಪ್ರಕ್ರಿಯೆ ಮೂಲಕ ಶವವನ್ನು ಪಡೆದುಕೊಂಡರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಾಯದಿಂದ ಅಂತ್ಯಸಂಸ್ಕಾರವನ್ನೂ ನಡೆಸಿದ್ದಾರೆ. ಇವರು ,ಕಳೆದ 25 ವರ್ಷಗಳಿಂದ ಯಾವುದೋ ಕಾರಣಕ್ಕೆ ನಾಪತ್ತೆಯಾಗಿದ್ದಾಗಿ ತಿಳಿದುಬಂದಿದೆ. .

- Advertisement -

Latest News

error: Content is protected !!