Friday, May 3, 2024
Homeಕರಾವಳಿಮಂಗಳೂರು – ಮುಂಬಯಿ ನಡುವೆ ಇಂಡಿಗೋ ವಿಮಾನದ ದೈನಂದಿನ ಸಂಚಾರ ಆರಂಭ

ಮಂಗಳೂರು – ಮುಂಬಯಿ ನಡುವೆ ಇಂಡಿಗೋ ವಿಮಾನದ ದೈನಂದಿನ ಸಂಚಾರ ಆರಂಭ

spot_img
- Advertisement -
- Advertisement -

ಮಂಗಳೂರು: ಮಂಗಳೂರು – ಮುಂಬಯಿ ನಡುವೆ ಇಂಡಿಗೋ ವಿಮಾನದ ದೈನಂದಿನ ಸಂಚಾರ ನಿನ್ನೆಯಿಂದ ಆರಂಭಗೊಂಡಿದೆ.

ಇಂಡಿಗೋದ ಏರ್‌ಬಸ್‌ ಎ320 ವಿಮಾನ ಪ್ರತಿದಿನ ಬೆಳಗ್ಗೆ 8.50ಕ್ಕೆ ಮುಂಬಯಿಯಿಂದ ಹೊರಟು 10.20ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ 11ಕ್ಕೆ ಹೊರಟು 12.40ಕ್ಕೆ ಮುಂಬಯಿ ತಲುಪಲಿದೆ.

ಮುಂಬಯಿ -ಮಂಗಳೂರು ನಡುವೆ ಮಧ್ಯಾಹ್ನವಿದ್ದ ಇಂಡಿಗೋ ವಿಮಾನಯಾನವನ್ನು ಜೂನ್‌ ತಿಂಗಳ ಆರಂಭಕ್ಕೆ ಸ್ಥಗಿತಗೊಳಿಸಲಾಗಿತ್ತು.

ಇನ್ನು ಮೇ 1ರಿಂದ ಆರಂಭಗೊಂಡಿರುವ ಹುಬ್ಬಳ್ಳಿ-ಮಂಗಳೂರು ನಡುವಿನ ಇಂಡಿಗೋ ವಿಮಾನ ಸಂಚಾರದ ಸಮಯ ಬದಲಾವಣೆ ಮಾಡಲಾಗಿದೆ.ಹೊಸ ವೇಳಾಪಟ್ಟಿಯಂತೆ ಹುಬ್ಬಳ್ಳಿಯಿಂದ ಸಂಜೆ 7ಕ್ಕೆ ಹೊರಟು ಮಂಗಳೂರಿಗೆ ರಾತ್ರಿ 8ಕ್ಕೆ ತಲುಪಲಿದೆ. ಮಂಗಳೂರಿನಿಂದ ರಾತ್ರಿ 8.20ಕ್ಕೆ ಹೊರಟು ಹುಬ್ಬಳ್ಳಿಗೆ 9.35ಕ್ಕೆ ತಲುಪಲಿದೆ.

ಅಲ್ಲಿಂದ 10 ಗಂಟೆಯ ಸುಮಾರಿಗೆ ಬೆಂಗಳೂರು ತಲುಪಲಿದೆ. ಈ ಹಿಂದೆ ಮಂಗಳೂರಿಗೆ ಸಂಜೆ 6.05ಕ್ಕೆ ತಲುಪಿ 6.35ಕ್ಕೆ ಹುಬ್ಬಳ್ಳಿಗೆ ಹೊರಡುತ್ತಿತ್ತು.

- Advertisement -
spot_img

Latest News

error: Content is protected !!