Monday, August 24, 2026
Homeಅಪರಾಧದಾರಿಯಲ್ಲಿ ಸಿಕ್ಕ ಹಣದ ಚೀಲ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

ದಾರಿಯಲ್ಲಿ ಸಿಕ್ಕ ಹಣದ ಚೀಲ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

- Advertisement -
- Advertisement -

ಮಂಗಳೂರು: ಆಗಸ್ಟ್ 21ರಂದು ಮಾಂಡೋವಿ ಮೋಟಾರ್ಸ್‌ನ ಉಪ್ಪಿನಂಗಡಿ ಶಾಖೆಯ ಉದ್ಯೋಗಿಗಳು ಬ್ಯಾಂಕ್‌ಗೆ ಜಮಾ ಮಾಡಲು ಕೊಂಡೊಯ್ಯುತ್ತಿದ್ದ ಹಣದ ಚೀಲ ದಾರಿಯಲ್ಲಿ ಕಳೆದುಹೋಗಿತ್ತು. ರಸ್ತೆಯಲ್ಲಿ ಸಾಗುತ್ತಿದ್ದ ಅಡ್ಯಾರ್‌ನ ಗ್ರಾನೈಟ್ ವರ್ಲ್ಡ್ ಮಾಲೀಕ ಯಾಕೂಬ್ ಅವರಿಗೆ ಈ ಚೀಲ ದೊರೆತಿದ್ದು, ಅವರು ತಕ್ಷಣವೇ ಅದನ್ನು ಮಂಗಳೂರು ಉಪ ಪೊಲೀಸ್ ಆಯುಕ್ತರ (DCP) ಕಚೇರಿಗೆ ತಲುಪಿಸಿ ಮಾದರಿಯಾಗಿದ್ದಾರೆ.

ಬಳಿಕ ಮಾಂಡೋವಿ ಮೋಟಾರ್ಸ್ ಸಂಸ್ಥೆಯ ಡಿಜಿಎಂ ಅಶೋಕ್ ಕುಮಾರ್ ಹಾಗೂ ಹಿರಿಯ ವ್ಯವಸ್ಥಾಪಕ ಶಿವಪ್ರಸಾದ್ ಅವರು ಪೊಲೀಸ್ ಕಚೇರಿಯಲ್ಲಿ ಹಣವನ್ನು ಪಡೆದುಕೊಂಡರು. ತಮ್ಮ ಸಂಸ್ಥೆಯ ಹಣವನ್ನು ಸುರಕ್ಷಿತವಾಗಿ ಹಿಂತಿರುಗಿಸಿದ ಯಾಕೂಬ್ ಅವರ ಪ್ರಾಮಾಣಿಕತೆಗೆ ಮಾಂಡೋವಿ ಮೋಟಾರ್ಸ್ ಕೃತಜ್ಞತೆ ಸಲ್ಲಿಸಿದೆ.

- Advertisement -

Latest News

error: Content is protected !!