Friday, June 27, 2025
Homeತಾಜಾ ಸುದ್ದಿಕಚ್ಚಿದ ಕನ್ನಡಿ ಹಾವನ್ನೇ ಹೆಗಲ ಮೇಲೆ ಹಾಕಿಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿ; ಕಂಗಾಲಾದ ವೈದ್ಯರು; ವಿಡಿಯೋ...

ಕಚ್ಚಿದ ಕನ್ನಡಿ ಹಾವನ್ನೇ ಹೆಗಲ ಮೇಲೆ ಹಾಕಿಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿ; ಕಂಗಾಲಾದ ವೈದ್ಯರು; ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

spot_img
- Advertisement -
- Advertisement -

ಬಿಹಾರದ ಭಾಗಲ್ಪುರದಲ್ಲಿ ವ್ಯಕ್ತಿಯೋರ್ವ ತನಗೆ ಕಚ್ಚಿದ ಹಾವನ್ನೇ ಹೆಗಲ ಮೇಲೆ ಹಾಕಿಕೊಂಡು ಆಸ್ಪತ್ರೆಗೆ ಬಂದ ಭಯಾನಕ ಘಟನೆಯೊಂದು ನಡೆದಿದೆ.

ತೋಟದಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಮಂಡಲ್ ಎಂಬ ವ್ಯಕ್ತಿಗೆ ಕನ್ನಡಿ ಹಾವೊಂದು ಕಚ್ಚಿದ್ದು, ಕೂಡಲೇ ಎಚ್ಚೆತ್ತ ಆತ ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದು ಹೆಗಲ ಮೇಲೆ ಹಾಕಿಕೊಂಡು ಆಸ್ಪತ್ರೆಗೆ ಧಾವಿಸಿದ್ದಾನೆ. ಇನ್ನು ಆತನ ಹೆಗಲ ಮೇಲಿರುವ ಹಾವನ್ನು ಕಂಡಂತಹ ಆಸ್ಪತ್ರೆಯ ವೈದ್ಯರು, ಸಿಬಂದಿಗಳು ಹಾಗೂ ರೋಗಿಗಳು ಗಾಬರಿಗೊಂಡಿದ್ದಾರೆ.

ಚಿಕಿತ್ಸೆಗೆಂದು ಬಂದ ವ್ಯಕ್ತಿ ಕೈಯಲ್ಲಿ ಹಾವನ್ನು ಹಿಡಿದುಕೊಂಡಿರುವುದರಿಂದ ವೈದ್ಯರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ವ್ಯಕ್ತಿಗೆ ಕಚ್ಚಿದ ಹಾವು ವಿಷಪೂರಿತವಾಗಿದ್ದುದರಿಂದ ವೈದ್ಯರು ಆತಂಕಗೊಂಡಿದ್ದಾ.ರೆ ಒಂದು ವೇಳೆ ವ್ಯಕ್ತಿ ತನ್ನ ಕೈಯಲ್ಲಿದ್ದ ಹಾವನ್ನು ಬಿಟ್ಟರೆ ಅದು ಏನು ಮಾಡುತ್ತದೋ ಎಂಬ ಭಯ ಒಂದು ಕಡೆಯಾದರೆ, ಹಾವನ್ನು ಕೈಯಲ್ಲೇ ಹಿಡಿದುಕೊಂಡರೆ ವ್ಯಕ್ತಿಗೆ ಚಿಕಿತ್ಸೆ ನೀಡುವುದು ಮತ್ತೊಂದು ಸಮಸ್ಯೆಯಾಗಿತ್ತು. ಹೀಗೆ ಕೊನೆಗೆ ವ್ಯಕ್ತಿಯ ಬಳಿ ಹಾವನ್ನು ಆಸ್ಪತ್ರೆಯ ಹೊರಗೆ ಬಿಡುವಂತೆ ಸೂಚಿಸಿದ್ದು ಅದರಂತೆ ವ್ಯಕ್ತಿ ಹಾವನ್ನು ಆಸ್ಪತ್ರ್ರೆ ಹೊರ ಭಾಗದಲ್ಲಿ ಬಿಟ್ಟು ಬಂದಿದ್ದಾರೆ. ಬಳಿಕ ಕೂಡಲೇ ಕಾರ್ಯಪ್ರವೃತ್ತರಾದ ವೈದ್ಯರು ವ್ಯಕ್ತಿಗೆ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.

https://x.com/News18Bihar/status/1846426787783278685

ಇನ್ನು ವ್ಯಕ್ತಿಯು ಹಾವನ್ನು ಹೆಗಲ ಮೇಲೆ ಹಾಕಿಕೊಂಡು ಆಸ್ಪತ್ರೆಗೆ ಬರುತ್ತಿರುವ ವಿಡಿಯೋ ಆಸ್ಪತ್ರೆಯಲ್ಲಿದ್ದವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದೀಗ ವೈರಲ್ ಆಗಿದೆ.  

- Advertisement -
spot_img

Latest News

error: Content is protected !!