Thursday, June 25, 2026
Homeಕರಾವಳಿವಿಟ್ಲ: ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ವಕೀಲನೊಬ್ಬನ ಬಂಧನ!

ವಿಟ್ಲ: ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ವಕೀಲನೊಬ್ಬನ ಬಂಧನ!

- Advertisement -
- Advertisement -

ಪುತ್ತೂರು: ವಿಟ್ಲದ ಎ.ಹೆಚ್.ಕಾಂಪ್ಲೆಕ್ಸ್‌ನಲ್ಲಿರುವ ವಕೀಲರೊಬ್ಬರ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಮೈ ಮುಟ್ಟಿ ದುರ್ವರ್ತನೆ ತೋರಿದ್ದಾರೆಂದು ಆರೋಪಿಸಿ ಯುವತಿಯ ದೂರಿನಂತೆ ನ್ಯಾಯವಾದಿ ಉಮ್ಮರ್ ಕೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ನೀಡಿದ ದೂರಿನಂತೆ ಪ್ರತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ನ್ಯಾಯವಾದಿ ಉಮ್ಮರ್ ಕೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಟ್ಲದ ವಿ.ಎಚ್. ಕಾಂಪ್ಲೆಕ್ಸ್ ನಲ್ಲಿ ಕಚೇರಿ ಹೊಂದಿರುವ ಉಮ್ಮರ್ ಕೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಗಸ್ಟ್ 16 ರಂದು ಸಂಜೆ ಯಾರೂ ಇಲ್ಲದ ವೇಳೆ ತನ್ನ ಮೈಮುಟ್ಟಿ ತಬ್ಬಿಕೊಳ್ಳಲು ಯತ್ನಿಸಿದ್ದು ಅಶ್ಲೀಲವಾಗಿ ವರ್ತಿಸಿದ್ದಾರೆಂದು ಯುವತಿ ದೂರು ನೀಡಿದ್ದರು. ಘಟನೆ ಬಗ್ಗೆ ಮನೆಯಲ್ಲಿ ಹೇಳುತ್ತೇನೆ ಎಂದಿದ್ದಕ್ಕೆ ನೀನು ಮನೆಯಲ್ಲಿ ಹೇಳಿದರೆ ನಿನ್ನದೇ ಮರ್ಯಾದೆ ಹೋಗುತ್ತದೆ ಎಂದು ಹೆದರಿಸಿದ್ದಾರೆ ಎಂಬುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು.

ಕಿರುಕುಳ ದೂರಿನಂತೆ, ಪೊಲೀಸರು ಆರೋಪಿ ವಕೀಲ ಉಮರ್ ಅನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!