Saturday, June 6, 2026
Homeಕರಾವಳಿಪುತ್ತೂರಿನ ಕೇಪುಳು ಸಿದ್ಯಾಳ ಎಂಬಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆ

ಪುತ್ತೂರಿನ ಕೇಪುಳು ಸಿದ್ಯಾಳ ಎಂಬಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆ

- Advertisement -
- Advertisement -

ಪುತ್ತೂರು;  ಇಲ್ಲಿನ ಕೇಪುಳು ಸಿದ್ಯಾಳ ಎಂಬಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ. ವ್ಯಕ್ತಿಯೊಬ್ಬರ ದೇಹದ ಎಲುಬುಗಳು ಹಾಗೂ ತಲೆಬುರುಡೆ ಪತ್ತೆಯಾಗಿದ್ದು ಆತಂಕ ಮೂಡಿಸಿದೆ.

ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತ ವ್ಯಕ್ತಿಯನ್ನು ತಾರಿಗುಡ್ಡೆ ಪರಿಸರದವರೆಂದು ಶಂಕಿಸಲಾಗಿದೆ.

ವ್ಯಕ್ತಿ ಮೃತಪಟ್ಟು ಹಲವು ದಿನಗಳೇ ಕಳೆದಿರಬೇಕು ಎಂದು ಅಂದಾಜಿಸಲಾಗಿದೆ. ಎಲುಬು ಸಿಕ್ಕಿದ ಜಾಗದಲ್ಲಿ ಗಿಡಗಂಟಿಗಳು ತುಂಬಿದ್ದರಿಂದ ಯಾರಿಗೂ ಈವರೆಗೆ ತಿಳಿಯದೆ ಇದ್ದು, ಇಂದು ಹುಲ್ಲು ತೆಗೆಯುವ ವೇಳೆ ಘಟನೆ ಬೆಳಕಿಗೆ ಬಂದಿದೆ.

- Advertisement -

Latest News

error: Content is protected !!