Wednesday, July 15, 2026
Homeಕರಾವಳಿಸುಳ್ಯದ ಕೃಷಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಿಂಡು

ಸುಳ್ಯದ ಕೃಷಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಿಂಡು

- Advertisement -
- Advertisement -

ಸುಳ್ಯ: ಇಲ್ಲಿನ ಕೃಷಿ ತೋಟಕ್ಕೆ ಕಾಡಾನೆಗಳ ಗುಂಪು ಲಗ್ಗೆ ಇಟ್ಟು ಕೃಷಿಯನ್ನು ಹಾನಿಗೊಳಿಸಿರುವ ಘಟನೆ ಮಂಡೆಕೋಲು ಗ್ರಾಮದಲ್ಲಿ ಸಂಭವಿಸಿದೆ.

ಮಂಡೆಕೋಲು ಗ್ರಾಮದ ತೋಟಪ್ಪಾಡಿ, ಬೈನೆಟಿ ಸ್ಥಾನ ಸಮೀಪದ ಕುಂಞಿರಾಮನ್‌, ವಸಂತ ಮತ್ತಿತರರ ತೋಟಕ್ಕೆ ಲಗ್ಗೆ ಇಟ್ಟಿರುವ ಸುಮಾರು ಎಂಟು ಕಾಡಾನೆಗಳು ಬಾಳೆ, ಅಡಿಕೆ ಕೃಷಿಯನ್ನು ಹಾಳುಗಡೆವಿವೆ. ಕಾಡಾನೆಗಳನ್ನು ಸ್ಥಳೀಯ 8-10 ಮಂದಿ ಸೇರಿಕೊಂಡು ಮತ್ತೆ ಕಾಡಿಗಟ್ಟುವಲ್ಲಿ ಸಫ‌ಲರಾಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!