Monday, June 8, 2026
Homeಅಪರಾಧಕ್ಷುಲಕ್ಕ ಕಾರಣಕ್ಕೆ ಬಾರ್ ನಲ್ಲಿ ಯುವಕರ ತಂಡದಿಂದ ಗಲಾಟೆ; ಬಿಯರ್ ಬಾಟಲಿ, ಸೋಡಾ ಬಾಟಲಿಯಿಂದ ಮಾರಣಾಂತಿಕ...

ಕ್ಷುಲಕ್ಕ ಕಾರಣಕ್ಕೆ ಬಾರ್ ನಲ್ಲಿ ಯುವಕರ ತಂಡದಿಂದ ಗಲಾಟೆ; ಬಿಯರ್ ಬಾಟಲಿ, ಸೋಡಾ ಬಾಟಲಿಯಿಂದ ಮಾರಣಾಂತಿಕ ಹಲ್ಲೆ

- Advertisement -
- Advertisement -

ಮಂಗಳೂರು: ಕೊಟ್ಟಾರ ಬಳಿಯ ಕೋಸ್ಟಲ್ ಬಾರ್ ನಲ್ಲಿ ಯುವಕನೊಬ್ಬನಿಗೆ ಮೂವರ ಯುವಕರ ತಂಡ ಬಿಯರ್ ಬಾಟಲಿ ಹಾಗೂ ಸೋಡಾ ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ರಾತ್ರಿ ವೇಳೆ ನಡೆದಿದೆ. ಘಟನೆಯ ಕುರಿತು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಹಲ್ಲೆಗೊಳಗಾದ ವ್ಯಕ್ತಿ ಅಶೋಕ್ ಪೂಜಾರಿ. ಬಾರು ಕೌಂಟರು ಬಳಿಯಲ್ಲಿಯೇ ಈತನಿಗೆ ರಕ್ತ ಚಿಮ್ಮುವಂತೆ ಹೊಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಶುರುವಾಗಿದ್ದು, ಮೊದಲು ಪರಸ್ಪರ ಮಾತಿನ ಚಕಮಕಿ ನಡೆದು ನಂತರಲ್ಲಿ ಹೊಡೆದಾಟ ನಡೆದಿದೆ. ಈ ವೇಳೆ ಓರ್ವ ಯುವಕ ಅಶೋಕ್ ಪೂಜಾರಿ ಮೇಲೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದಾನೆ. ಬಿಯರ್ ಬಾಟಲಿಯಿಂದ ಹಲ್ಲೆಗೈದವನನ್ನು ರೀತು ಎಂದು ಗುರುತಿಸಲಾಗಿದೆ.

ಇನ್ನು ಬಿಯರ್ ಬಾಟಲಿ, ಸೋಡಾ ಬಾಟಲಿ ಚೂರಿನಿಂದ ತಲೆ ಹಾಗೂ ಮುಖದ ಭಾಗಗಳಿಗೆ ತಿವಿದು ಕೊಲೆ ಯತ್ನ ನಡೆಸಲಾಗಿದೆ. ತಲೆಗೆ, ಬೆನ್ನಿಗೆ ಮತ್ತು ಮುಖಕ್ಕೆ ಬಲವಾಗಿ ಹೊಡೆದು ರಕ್ತ ಚಿಮ್ಮುವಂತೆ ಹಲ್ಲೆ ನಡೆಸಲಾಗಿದೆ. ಗಾಯಾಳುವಿನ ತಲೆ, ಮುಖ, ಬೆನ್ನಿನ ಭಾಗಗಳಲ್ಲಿ ಹಾಗೂ ಮೂಗಿನ ಮೂಳೆ ಮುರಿತ ಒಳಗಾಗಿದೆ ಎಂದು ತಿಳಿದು ಬಂದಿದೆ.

ಹಲ್ಲೆಗೊಳಗಾದ ಅಶೋಕ್ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!