Wednesday, June 3, 2026
Homeಉದ್ಯಮಕುಸಿದು ಬಿದ್ದು ಮೃತಪಟ್ಟ ಮೀನು ವ್ಯಾಪಾರಿ

ಕುಸಿದು ಬಿದ್ದು ಮೃತಪಟ್ಟ ಮೀನು ವ್ಯಾಪಾರಿ

- Advertisement -
- Advertisement -

ಕಿನ್ನಿಗೋಳಿ: ಇಲ್ಲಿನ ಸಮೀಪದ ಪಕ್ಷಿಕೆರೆಯಲ್ಲಿ ಮೀನು ವ್ಯಾಪಾರಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ.

ಮೃತರನ್ನು‌ ಪಕ್ಷಿಕೆರೆ ನಿವಾಸಿ ಅಬ್ದುಲ್ ಖಾದರ್ (55) ಎಂದು ‌ಗುರುತಿಸಲಾಗಿದೆ.

ಅಬ್ದುಲ್ ಖಾದರ್ ಕಿನ್ನಿಗೋಳಿ ಮಂಗಳೂರು ‌ಬಸ್ಸಿನಲ್ಲಿ ಏಜೆಂಟ್ ಆಗಿದ್ದರು. ಕೋವಿಡ್‌ ನಂತರ ಮೀನು ವ್ಯಾಪರ ಪ್ರಾರಂಭಿಸಿದ್ದು, ಎಂದಿನಂತೆ ಮಲ್ಪೆಯಿಂದ ತನ್ನ ದ್ವಿಚಕ್ರವಾಹನದಲ್ಲಿ ಮೀನು ತಂದು ಪಕ್ಷಿಕೆರೆ ಹೊಸಕಾಡು ಸಮೀಪ ಮನೆಯವರಿಗೆ ಮೀನು ಕೊಡುವಾಗ ಕುಸಿದು ಬಿದ್ದಿದ್ದಾರೆ. ಕೂಡಲೇ  ಖಾಸಗಿ ಅಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!