Sunday, June 7, 2026
Homeಉತ್ತರ ಕನ್ನಡಕಾರವಾರ: ನದಿ ಬಳಿ ಹೋಗುತ್ತಿದ್ದ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ

ಕಾರವಾರ: ನದಿ ಬಳಿ ಹೋಗುತ್ತಿದ್ದ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ

- Advertisement -
- Advertisement -

ಕಾರವಾರ: ಶನಿವಾರ ಸಂಜೆ ನದಿ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಮೊಸಳೆ ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ನಡೆದಿದೆ. ಸುರೇಶ್(44) ಮೊಸಳೆ ದಾಳಿಗೆ ಒಳಗಾದವರು.

ದಾಂಡೇಲಿಯ ಆಲೈಡ್ ಏರಿಯಾ ಸಮೀಪ ನದಿ ಬಳಿ ನಡೆದುಕೊಂಡು ಹೋಗುವ ವೇಳೆ ದಿಢೀರ್ ದಾಳಿ ಮಾಡಿದ ಮೊಸಳೆ ಅವರನ್ನು ಎಳೆದೊಯ್ದಿದೆ.

ಘಟನೆ ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಡಿವೈಎಸ್ಪಿ ಕೆ.ಎಲ್. ಗಣೇಶ್, ಪೌರಾಯುಕ್ತ ರಾಜಾರಾಮ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರೇಶ್ ಅವರಿಗಾಗಿ ನದಿಯಲ್ಲಿ ತೀವ್ರ ಹುಡುಕಾಟ ನಡೆಸಲಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!