Friday, May 10, 2024
Homeಇತರಕುಕ್ಕರ್‌ ಒಳಗೆ ತಲೆ ಸಿಲುಕಿಸಿಕೊಂಡ ಮಗು: ವೈದ್ಯರಿಂದ ರಕ್ಷಣೆ

ಕುಕ್ಕರ್‌ ಒಳಗೆ ತಲೆ ಸಿಲುಕಿಸಿಕೊಂಡ ಮಗು: ವೈದ್ಯರಿಂದ ರಕ್ಷಣೆ

spot_img
- Advertisement -
- Advertisement -

ಆಗ್ರಾ: ಒಂದೂವರೆ ವರ್ಷದ ಮಗುವೊಂದು ಆಟವಾಡುತ್ತಿದ್ದ ಸಂದರ್ಭದಲ್ಲಿ ತನ್ನ ತಲೆಯನ್ನು ಪ್ರೆಷರ್‌ ಕುಕ್ಕರ್‌ ಒಳಗೆ ಹಾಕಿ ಸಿಲುಕಿಸಿಕೊಂಡ ಘಟನೆ ಆಗ್ರಾದ ಲೋಹಮಂಡಿಯಲ್ಲಿರುವ ಖಾಟಿಪುರದ ಬಳಿ ನಡೆದಿದೆ.

ಮನೆಯಲ್ಲಿ ಕುಕ್ಕರ್‌ ಅನ್ನು ಕೆಳಗೆ ಇಟ್ಟಿದ್ದರು. ಈ ವೇಳೆ ಮಗು ಆಟವಾಡುತ್ತಾ ಅದನ್ನು ಎತ್ತಿಕೊಂಡು ತಲೆಯೊಳಕ್ಕೆ ಸಿಕ್ಕಿಸಿಕೊಂಡಿದೆ. ಮನೆಯವರು ಏನೇ ಸಾಹಸ ಮಾಡಿದರೂ ಮಗುವಿನ ತಲೆಯನ್ನು ಹೊರಕ್ಕೆ ತೆಗೆಯಲು ಸಾಧ್ಯವಾಗಿಲ್ಲ.

ಆ ಸಂದರ್ಭದಲ್ಲಿ ಗ್ರೈಂಡರ್ ಯಂತ್ರದೊಂದಿಗೆ ಸ್ಥಳಕ್ಕೆ ದೌಡಾಯಿಸಿದ ವೈದ್ಯರ ತಂಡ ಮಗುವಿನ ತಲೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸತತ ಎರಡು ಗಂಟೆಗಳ ಕಾಲ ಶ್ರಮ ವಹಿಸಿ ಕುಕ್ಕರ್‍ನನ್ನು ಗ್ರೈಂಡರ್ ಯಂತ್ರದಿಂದ ಕಟ್ ಮಾಡಿ ಮಗುವಿನ ಪ್ರಾಣ ರಕ್ಷಿಸಿದ್ದಾರೆ.

- Advertisement -
spot_img

Latest News

error: Content is protected !!