Saturday, June 6, 2026
Homeತಾಜಾ ಸುದ್ದಿಪುತ್ತೂರು: ಅಪಾರ್ಟ್‌ಮೆಂಟ್‌ನಿಂದ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣ: ಸಮಗ್ರ ತನಿಖೆಗೆ ಮನವಿ ಮಾಡಿದ ಬಾಲಕನ ತಂದೆ

ಪುತ್ತೂರು: ಅಪಾರ್ಟ್‌ಮೆಂಟ್‌ನಿಂದ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣ: ಸಮಗ್ರ ತನಿಖೆಗೆ ಮನವಿ ಮಾಡಿದ ಬಾಲಕನ ತಂದೆ

- Advertisement -
- Advertisement -

ಪುತ್ತೂರು: ಆ.5ರಂದು ಸಂಜೆ ಬೊಳುವಾರು ವಸತಿ ಸಮುಚ್ಚಯವೊಂದರ ಮಹಡಿಯಿಂದ ಬಾಲಕ ಬಿದ್ದು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು ಅಂತ ಬಾಲಕನ ತಂದೆ ಪುತ್ತೂರು ನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಬೊಳುವಾರು ಬೈಲಿನಲ್ಲಿ ವಾಸ್ತವ್ಯವಿರುವ ಪದ್ಮುಂಜ ಕೆನರಾ ಬ್ಯಾಂಕ್‌ನ ನಿವೃತ ಮ್ಯಾನೇಜರ್, ಮನೋಹರ ರೈ ಪುತ್ರ, 9ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ (15) ಬೊಳುವಾರಿನ ‘ಕೀರ್ತನ್ ರೆಸಿಡೆನ್ಸಿ’ ವಸತಿ ಸಮುಚ್ಚಯದ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದ. ಆದ್ರೆ ಆತ ಮಹಡಿಯಿಂದ ಹೇಗೆ ಬಿದ್ದ ಎಂಬುದು ಇನ್ನೂ ನಿಗೂಢವಾಗಿದೆ. ಹಾಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸ್ಬೇಕು ಅಂತ ಬಾಲಕನ ತಂದೆ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!