Thursday, June 4, 2026
Homeಅಪರಾಧಮಂಗಳೂರು: ಕಾರು ಚಾಲಕನಿಂದ ಬಸ್ ಚಾಲಕನ ಮೇಲೆ ಹಲ್ಲೆ !

ಮಂಗಳೂರು: ಕಾರು ಚಾಲಕನಿಂದ ಬಸ್ ಚಾಲಕನ ಮೇಲೆ ಹಲ್ಲೆ !

- Advertisement -
- Advertisement -

ಮಂಗಳೂರು: ಕೋಡಿಕಲ್‌ನಲ್ಲಿ ಕಾರು ಚಾಲಕ ತನ್ನ ವಾಹನವನ್ನು ರಸ್ತೆಯ ನಡುವೆ ನಿಲ್ಲಿಸಿದ್ದರಿಂದ ಬಸ್ ಚಾಲಕ ಹಾರ್ನ್ ಮಾಡಿದ್ದಾನೆ. ಇದರಿಂದ ಕಾರು ಚಾಲಕ ಬಸ್ ಚಾಲಕನನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ. ಕೋಡಿಕಲ್ ಪರಿಸರದಲ್ಲಿ ಈ ಘಟನೆ ವರದಿಯಾಗಿದೆ.

ಬಸ್ ಮಂಗಳೂರು ನಗರದಿಂದ ಕೋಡಿಕಲ್ ಕಡೆಗೆ ತೆರಳುತ್ತಿತ್ತು. ಬಸ್ಸಿನಲ್ಲಿದ್ದ ಚಾಲಕನ ಮೇಲೆ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಘಟನೆಯ ವೇಳೆ ಬಸ್‌ನಲ್ಲಿ ಪ್ರಯಾಣಿಕರಿದ್ದರು.

ಕುಡಿದ ಮತ್ತಿನಲ್ಲಿ ಕಾರು ಚಾಲಕ ತನ್ನ ವಾಹನವನ್ನು ರಸ್ತೆ ಮಧ್ಯೆ ನಿಲ್ಲಿಸಿ ಸಂಚಾರಕ್ಕೆ ತೊಂದರೆಯಾಗುವಂತೆ ಮಾಡಿದ್ದ ಎನ್ನಲಾಗಿದೆ.

ಬಳಿಕ ಬಸ್ ಸಿಬ್ಬಂದಿ ಪೊಲೀಸ್ ಠಾಣೆಗೆ ತೆರಳಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ತೆರಳುವಂತೆ ಹೇಳಿದ್ದಾರೆ ಎಂದು ಬಸ್ ಚಾಲಕ ಆರೋಪಿಸಿದ್ದಾರೆ.

- Advertisement -

Latest News

error: Content is protected !!