Friday, June 5, 2026
Homeತಾಜಾ ಸುದ್ದಿಯೂಟ್ಯೂಬ್ ನೋಡಿ ವೈನ್ ತಯಾರಿಸಿದ ಬಾಲಕ: ವೈನ್ ಕುಡಿದು ಆಸ್ಪತ್ರೆ ಸೇರಿದ ಗೆಳೆಯ

ಯೂಟ್ಯೂಬ್ ನೋಡಿ ವೈನ್ ತಯಾರಿಸಿದ ಬಾಲಕ: ವೈನ್ ಕುಡಿದು ಆಸ್ಪತ್ರೆ ಸೇರಿದ ಗೆಳೆಯ

- Advertisement -
- Advertisement -

ಕೇರಳ: ಯೂಟ್ಯೂಬ್‌ ನಲ್ಲಿ ಈಗಂತೂ ಅಡುಗೆ ಚಾನೆಲ್‌ಗಳದ್ದೇ ಅಬ್ಬರ. ಅಡುಗೆ ಬಾರದವರು ಯ್ಯೂಟ್ಯೂಬ್‌ ಚಾನೆಲ್‌ ನೋಡ್ಕೊಂಡು ಅಡುಗೆ ಮಾಡೋದು ಕಾಮನ್‌ ಆಗ್ಬಿಟ್ಟಿದೆ. ಅದೇ ರೀತಿ ಇಲ್ಲೊಬ್ಬ ಬಾಲಕ ಯ್ಯೂಟ್ಯೂಬ್‌ ನೋಡ್ಕೊಂಡು ವೈನ್‌ ತಯಾರಿಸೋಕೆ ಹೋಗಿ ಎಡವಟ್ಟು ಮಾಡ್ಕೊಂಡಿದ್ದಾನೆ.  

ಹೌದು ಯೂಟ್ಯೂಬ್ ವಿಡಿಯೋ ನೋಡಿಕೊಂಡು ದ್ರಾಕ್ಷಿವೈನ್ ತಯಾರಿಸಿದ್ದು, ಅದನ್ನು ಸ್ನೇಹಿತನಿಗೆ ನೀಡಿದ್ದಾರೆ. ಅದನ್ನು ಕುಡಿದ ಬಳಿಕ ಗೆಳೆಯನಿಗೆ ವಾಂತಿ,ಉಂಟಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈನ್ ನಲ್ಲಿ ಮದ್ಯದ ಅಂಶ ಅಥವಾ ಸ್ಪಿರಿಟ್ ಮಿಶ್ರಣವಾಗಿರುವುದು ಕಂಡುಬಂದಲ್ಲಿ ಅದನ್ನು ತಯಾರಿಸಿದ ಬಾಲಕನ ವಿರುದ್ಧ ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಆತ ಮಾಡಿರುವ ಕೃತ್ಯದ ಪರಿಣಾಮಗಳನ್ನು ಆತನ ಪೋಷಕರಿಗೆ ಹಾಗೂ ಶಾಲಾ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. 

- Advertisement -

Latest News

error: Content is protected !!