Saturday, June 6, 2026
Homeತಾಜಾ ಸುದ್ದಿಬಾಲಕನ ಜೀವಕ್ಕೆ ಕಂಟಕ ತಂದಿಟ್ಟಿದ್ದ ಇಂಗ್ಲಿಷ್‌ ಪಾಠ: ಅದೃಷ್ಟವಶಾತ್‌ ಬಾಲಕ ಪ್ರಾಣಾಪಾಯದಿಂದ ಪಾರು

ಬಾಲಕನ ಜೀವಕ್ಕೆ ಕಂಟಕ ತಂದಿಟ್ಟಿದ್ದ ಇಂಗ್ಲಿಷ್‌ ಪಾಠ: ಅದೃಷ್ಟವಶಾತ್‌ ಬಾಲಕ ಪ್ರಾಣಾಪಾಯದಿಂದ ಪಾರು

- Advertisement -
- Advertisement -

ತುಮಕೂರು: ಇಂಗ್ಲಿಷ್‌ ಪಾಠ ಕಲಿಯಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ 7ನೇ ತರಗತಿಯ ಬಾಲಕನೋರ್ವ ವಿಷಸೇವಿಸಿ ಆತ್ಮಹತ್ಯೆ ಯತ್ನ ನಡೆಸಿದ ಘಟನೆ ತುಮಕೂರು ತಾಲ್ಲೂಕಿನ ಊರ್ಡಿಗೆರೆ ಗ್ರಾಮದಲ್ಲಿ ನಡೆದಿದೆ. ತುಮಕೂರಿನ ಕೋತಿತೋಪು ನಿವಾಸಿಗಳಾದ ಸೋಮಶೇಖರ್‌, ಜಯಮ್ಮ ದಂಪತಿಯ ಮಗ ಅಜಯ್‌ ಆತ್ಮಹತ್ಯೆಗೆ ಯತ್ನಿಸಿದ ಬಾಲಕ. ತುಮಕೂರು ನಗರದ ಕೋತಿತೋಪು ಸರ್ಕಾರಿ ಶಾಲೆಯಲ್ಲಿ  6ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದ. ಆದರೆ ಉದ್ಯೋಗದ ನಿಮಿತ್ತ ಅಜಯ್‌ ಪೋಷಕರು ಊರ್ಡಿಗೆರೆಗೆ ಶಿಫ್ಟ್‌ ಆಗಿದ್ದಾರೆ. ಅದರಂತೆ ಅಜಯ್‌ ಕೂಡ ಕೋತಿತೋಪು ಸರ್ಕಾರಿ ಶಾಲೆಯಿಂದ ಊರ್ಡಿಗೆರೆ ಶಾಲೆಗೆ ಸೇರ್ಪಡೆಗೊಂಡಿದ್ದಾನೆ.

ಈ ತಿಂಗಳ 16ರಂದು  ಶಾಲೆ ಪ್ರಾರಂಭವಾಗಿದೆ. ಒಂದೆರಡು ದಿನ ಶಾಲೆಗೆ ಹೋದ ಅಜಯ್‌ ಮತ್ತೆ ತರಗತಿಗೆ ಹೋಗದಂತೆ ಹಿಂದೇಟು ಹಾಕಿದ್ದಾನೆ. ಪೋಷಕರು ಎಷ್ಟೇ ಹೇಳಿದರು ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಟ್ಟು ಹಿಡಿದ್ದಾನೆ. ಕೊನೆಗೆ ಪೋಷಕರು ಶಾಲೆಗೆ ಹೋಗುವಂತೆ ಒತ್ತಡ ಹೇರಿದ ಪರಿಣಾಮ, ನಿನ್ನೆ ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಗಿಡಕ್ಕೆ ಹೊಡೆಯುವ ಕ್ರಿಮಿನಾಶಕವನ್ನು ಸೇವಿಸಿದ್ದಾನೆ.  ವಿಷ ಸೇವಿಸಿದ ಅಜಯ್‌ ಗೆ ವಾಂತಿ ಹಾಗೂ ತಲೆ ಸುತ್ತು ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಪೋಷಕರು ಅಜಯ್‌ ಅನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ವಿದ್ಯಾರ್ಥಿಯ ಜೀವ ಉಳಿಸಿದ್ದಾರೆ.

- Advertisement -

Latest News

error: Content is protected !!